ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ 66 ಅಗತ್ಯ ವಸ್ತುಗಳ ತೆರಿಗೆ ದರ ಕಡಿತ

ಜುಲೈ 1ರಿಂದ ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಜಾರಿಗೆ ಬರಲಿದ್ದು ಈ ಹಿನ್ನೆಲೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ಜುಲೈ 1ರಿಂದ ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಜಾರಿಗೆ ಬರಲಿದ್ದು ಈ ಹಿನ್ನೆಲೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೆಲ ಅಗತ್ಯ 66 ವಸ್ತುಗಳ ತೆರಿಗೆ ದರವನ್ನು ಕಡಿಮೆ ಮಾಡಿದೆ. 
ಉಪ್ಪಿನಕಾಯಿ ಮತ್ತು ಸಾಸಿವೆ ಸಾಸು ಸೇರಿದಂತೆ ಕೆಲವು ಅಡುಗೆ ವಸ್ತುಗಳು ಮತ್ತು ಸಿನಿಮಾ ಟಿಕೆಟ್ ದರ ಕಡಿಮೆಯಾಗಲಿದೆ. ಟಿಕೆಟ್ ದರ 100 ರುಪಾಯಿಯೊಳಗಿದ್ದರೆ ಶೇಕಡ 28ರ ಬದಲಿಗೆ ಶೇಕಡ 18ರಂದು ತೆರಿಗೆ ದರ ವಿಧಿಸಲಾಗುತ್ತದೆ. 100 ರುಪಾಯಿಗಿಂತ ಹೆಚ್ಚಿದ್ದರೆ ಎಂದಿನಂತೆ ಶೇಕಡ 28ರಷ್ಟು ತೆರಿಗೆ ಅನ್ವಯವಾಗಲಿದೆ. 
ಕೆಲವು ಅಡುಗೆ ವಸ್ತುಗಳಾದ ಉಪ್ಪಿನಕಾಯಿ ಮತ್ತು ಸಾಸಿವೆ ಸಾಸು ಮೇಲಿನ ಈ ಹಿಂದಿನ ಇದ್ದ ತೆರಿಗೆ ದರ ಶೇಕಡ 18ರಷ್ಟಿದ್ದು ಇದೀಗ ಅದನ್ನು ಶೇಖಡ 12ಕ್ಕೆ ಇಳಿಸಲಾಗಿದೆ. ಇನ್ನು ಮಕ್ಕಳ ಡ್ರಾಯಿಂಗ್ ಬುಕ್ಸ್ ಮೇಲಿನ ತೆರಿಗೆ ದರವನ್ನು ಶೇಖಡ 12ಕ್ಕೆ ಇಳಿಸಲಾಗಿದೆ. ಕಂಪ್ಯೂಟರ್ ಪ್ರಿಂಟರ್ಸ್ ಮೇಲಿನ ತೆರಿಗೆ ದರವನ್ನು ಶೇಕಡ 28ರಿಂದ 18ಕ್ಕೆ ಇಳಿಸಲಾಗಿದೆ. 
ವ್ಯಾಪಾರಿಗಳು, ತಯಾರಕರು ಮತ್ತು ರೆಸ್ಟೋರೆಂಟ್ ಮಾಲೀಕರು 75 ಲಕ್ಷ ರುಪಾಯಿ ವಹಿವಾಟು ನಡೆಸಿದ್ದರಂತೆ ಅಂತವರಿಗೆ ಸಂಯೋಜನೆ ಯೋಜನೆಯಡಿ ಶೇಖಡ 1,2 ಮತ್ತು 5ರಷ್ಟು ಕಡಿಮೆ ಮಾಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. 
ಮುಂದಿನ ಕೌನ್ಸಿಲ್ ಸಭೆ ಜೂನ್ 18ರಂದು ನಡೆಯಲಿದ್ದು ಅಂದು ಲಾಟರಿ ತೆರಿಗೆ ಮತ್ತು ಇ-ವೇ ಬಿಲ್ ಗಳ ಮೇಲಿನ ತೆರಿಗೆ ದರವನ್ನು ನಿರ್ಣಯಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com