ಒಂದು ವೇಳೆ ಯುದ್ಧ ನಡೆದರೆ ಮೂರು ಪಡೆಗಳೂ ಸೇರಿ ಒಟ್ಟಾಗಿ ಯುದ್ಧ ಮಾಡಲಿದ್ದೇವೆ: ಜ.ರಾವತ್

ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮತ್ತೊಮ್ಮೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಲು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿರಾಕರಿಸಿದ್ದಾರೆ.
ಬಿಪಿನ್ ರಾವತ್
ಬಿಪಿನ್ ರಾವತ್
ನವದೆಹಲಿ: ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮತ್ತೊಮ್ಮೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಲು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿರಾಕರಿಸಿದ್ದಾರೆ. 
ಭಾರತೀಯ ಸೇನೆಯ ಆಧುನೀಕರಣಕ್ಕೆ ಹಣ ನೀಡಲು ಭಾರತ ಸರ್ಕಾರ ಸಿದ್ಧವಿದೆ,  ಅನುದಾನದ ಕೊರತೆ ಇಲ್ಲ. ಒಂದು ವೇಳೆ ನಾವು ಯುದ್ಧ ಮಾಡುವುದಾದರೆ ಮೂರು ಪಡೆಗಳೂ ಸೇರಿ ಒಟ್ಟಾಗಿ ಯುದ್ಧ ಮಾಡಲಿದ್ದೇವೆ ಎಂದು ಬಿಪಿನ್ ರಾವತ್ ಮಾರ್ಮಿಕವಾಗಿ ಹೇಳಿದ್ದಾರೆ. ಭಾರತದ ಮೂರು ಪಡೆಗಳು ಒಟ್ಟಾಗಿ ಸೇರಬೇಕು, ಈ ಕುರಿತ ಆಯ್ಕೆಯನ್ನು ಪರಿಗಣಿಸಬೇಕು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. 
ಸಂಪನ್ಮೂಲಗಳನ್ನು ಭಾರತದ ಮೂರೂ ಪಡೆಗಳು ಸುಸಂಗತವಾದ ವಿಧಾನ ಬಳಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂದರೆ ಆರ್ಥಿಕ ಹೊರೆಯನ್ನೂ ತಪ್ಪಿಸಬಹುದು ಎಂದು ರಾವತ್ ಹೇಳಿದ್ದು, ಇಂಟಿಗ್ರೇಟೆಡ್ ಕಮಾಂಡ್ ನ ಆಯ್ಕೆ ಬಗ್ಗೆ ಪರಿಶೀಲನೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ. 
ಮುಂದಿನ ಯುದ್ಧ ತಂತ್ರ ರೂಪಿಸಲು ಮೂರು ಪಡೆಗಳ ಜಂಟಿ ಕಾರ್ಯಾಚರಣೆ ಅಗತ್ಯವಾಗಲಿದೆ ಎಂದು ಇತ್ತೀಚೆಗಷ್ಟೇ ಭಾರತೀಯ ಸಶಸ್ತ್ರ ಪಡೆಗಳು ಸಹ ಇತ್ತೀಚೆಗಷ್ಟೆ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಇದೇ ವೇಳೆ ಏಕಕಾಲಕ್ಕೆ ಎರಡು ರಾಷ್ಟ್ರಗಳೊಂದಿಗೆ ಯುದ್ಧ ಮಾಡುವ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ರಾವತ್, ನಾವು ನಿರ್ದಿಷ್ಟ ಯೋಜನೆ ಹೊಂದಿದ್ದೇವೆ, ನಮ್ಮದೇ ಆದ ನಿಯಮಗಳಿದೆ ಎಂದಷ್ಟೇ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com