ಉರಿ ದಾಳಿ: ಪಾಕಿಸ್ತಾನಕ್ಕೆ ಎನ್ಐಎ ಪತ್ರ, ಉಗ್ರನ ಡಿಎನ್ಎ ಬಗ್ಗೆ ಉಲ್ಲೇಖ

ಉರಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಭಾರತದ ತನಿಖಾ ಸಂಸ್ಥೆ ಎನ್ಐಎ ಅಧಿಕೃತ ಪತ್ರ ಕಳಿಸಿದ್ದು ತನಿಖೆಗೆ ಸಹಕರಿಸುವಂತೆ ಕೋರಿದೆ.
ಉರಿ ಭಯೋತ್ಪಾದಕ ದಾಳಿ
ಉರಿ ಭಯೋತ್ಪಾದಕ ದಾಳಿ
ನವದೆಹಲಿ: ಉರಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಭಾರತದ ತನಿಖಾ ಸಂಸ್ಥೆ  ಎನ್ಐಎ ಅಧಿಕೃತ ಪತ್ರ ಕಳಿಸಿದ್ದು ತನಿಖೆಗೆ ಸಹಕರಿಸುವಂತೆ ಕೋರಿದೆ. 
ಇಂಡಿಯಾ ಟುಡೆ ವರದಿ ಪ್ರಕಾರ, ದಾಳಿಯ ನಂತರ ವಶಕ್ಕೆ ಪಡೆದಿರುವುದರ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪಾಕಿಸ್ತಾನಕ್ಕೆ ಎನ್ಐಎ ಮನವಿ ಮಾಡಿದೆ. 2016  ರ ಸೆಪ್ಟೆಂಬರ್ ನಲ್ಲಿ  ಉರಿ ಸೆಕ್ಟರ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಹಿಂದೆ ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯ ಅಬು ಅನಾಸ್ ಎಂಬ ಉಗ್ರನ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಆತನ ಡಿಎನ್ಎ, ಬಟ್ಟೆ, ಶೂ, ಔಷಧಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. 
ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಉಳಿದ 3 ಉಗ್ರರ ಗುರುತು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. 2016 ರ ಸೆಪ್ಟೆಂಬರ್ ನಲ್ಲಿ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ  ಭಾರತೀಯ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ಉಗ್ರರು 18 ಯೋಧರನ್ನು ಹತ್ಯೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com