ನ್ಯಾಯಾಧೀಶ ಸಿಎಸ್ ಕರ್ಣನ್ ಇಂದು ನಿವೃತ್ತಿ, ಆದ್ರೆ ಪತ್ತೇನೆ ಇಲ್ಲ!

ನ್ಯಾಯಾಂಗ ನಿಂದನೆ ಆರೋಪದಲ್ಲಿ ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಧೀಶ ಸಿ.ಎಸ್ ಕರ್ಣನ್ ಅವರಿಗೆ ಅರು ತಿಂಗಳ ...
ಸಿ. ಎಸ್ ಕರ್ಣನ್
ಸಿ. ಎಸ್ ಕರ್ಣನ್
ಚೆನ್ನೈ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಧೀಶ ಸಿ.ಎಸ್ ಕರ್ಣನ್ ಅವರಿಗೆ ಅರು ತಿಂಗಳ ಕಾಲ ಸೆರೆವಾಸಕ್ಕೆ ಗುರಿಯಾಗಿದ್ದಾರೆ. ಇಂದು ಕರ್ಣನ್ ನಿವೃತ್ತಿ ಹೊಂದುತ್ತಿದ್ದಾರೆ, ಆದರೂ ಇದುವರೆಗೂ ಅವರು ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಕೊಲ್ಕೊತಾ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿರುವ  ಕರ್ಣನ್ ಇಂದು ತಮ್ಮ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ, ಆದರೆ ಅವರು ನಾಪತ್ತೆಯಾಗಿದ್ದಾರೆ.
ಮಾರ್ಚ್ 31 ರಂದು ಕರ್ಣನ್ ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದರು, ಕರ್ತವ್ಯದಲ್ಲಿರುವಾಗ ನ್ಯಾಯಾಂಗ ನಿಂದನೆ ಆರೋಪದಲ್ಲಿ ಕೋರ್ಟ್ ಗೆ ಹಾಜರಾಗಿದ್ದ ಮೊದಲ ಜಡ್ಜ್ ಸಿ.ಎಸ್ ಕರ್ಣನ್ ಆಗಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕರ್ಣನ್ ಅವರಿಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು, ಅಂದಿನಿಂದ ಇಲ್ಲಿಯವರೆಗೂ ಕರ್ಣನ್ ನಾಪತ್ತೆಯಾಗಿದ್ದಾರೆ.
ಕರ್ಣನ್ ಅವರ ಗೈರು ಹಾಜರಿಯಲ್ಲಿ  ಶಿಕ್ಷೆ ವಿಧಿಸಿದ ಕೋರ್ಟ್ ಅವರನ್ನು ಕೂಡಲೇ ಬಂಧಿಸಲು ತಂಡ ರಚಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚಿಸಿತ್ತು, ಹೀಗಿದ್ದರೂ ಕರ್ಣನ್ ಇದುವರೆಗೂ ಪತ್ತೆಯಾಗಿಲ್ಲ.
ಮೇ 11 ರಂದು ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಕರ್ಣನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು, 
ಮೇ 17 ರಂದು  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದಯೆ ಆಧಾರದ ಮೇಲೆ ಜಾಮೀನು ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. 
ಸುಪ್ರೀಂಕೋರ್ಟ್ ಉನ್ನತ ನ್ಯಾಯಮೂರ್ತಿಗಳು ಹಾಗೂ ಮದ್ರಾಸ್ ಹೈಕೋರ್ಟ್ ಜಡ್ಜ್ ಗಳ ವಿರುದ್ಧ  ಭ್ರಷ್ಟಾಚಾರ ಆರೋಪ ಹೊರಿಸಿ ಪ್ರಧಾನಿ ಅವರಿಗೆ ಕರ್ಣನ್ ಪತ್ರ ಬರೆದಿದ್ದರು,  ಮಾರ್ಚ್ 10 ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕರ್ಣನ್ ವಿರುದ್ದ ವಾರಂಟ್ ಜಾರಿಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com