ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗರ್ಭಿಣಿ ಮಹಿಳೆಯರು ಮಾಂಸ ಮತ್ತು ಸೆಕ್ಸ್ ನಿಂದ ದೂರವಿರಬೇಕು: ಮೋದಿ ಸರ್ಕಾರದ ಸಚಿವಾಲಯ

ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತದ ಆಯುಷ್ ಸಚಿವಾಲಯ ಮಂಗಳವಾರ ತಾಯಿ ಮತ್ತು ಮಕ್ಕಳ ರಕ್ಷಣೆ....
ನವದೆಹಲಿ: ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತದ ಆಯುಷ್ ಸಚಿವಾಲಯ ಮಂಗಳವಾರ ತಾಯಿ ಮತ್ತು ಮಕ್ಕಳ ರಕ್ಷಣೆ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗರ್ಭಿಣಿ ಮಹಿಳೆಯರು ಮಾಂಸ ಮತ್ತು ಸೆಕ್ಸ್ ನಿಂದ ದೂರವಿರಬೇಕು ಎಂದು ಸಲಹೆ ನೀಡಲಾಗಿದೆ.
ಭಾರತದಲ್ಲಿ ಪ್ರತಿ ವರ್ಷ 21 ಮಿಲಿಯನ್ ಮಕ್ಕಳು ಜನಿಸುತ್ತಾರೆ. ಆರೋಗ್ಯವಂತ ಮಗುವಿಗಾಗಿ ಮಹಿಳೆಯರು ಗರ್ಭ ನಿಂತ ಕೂಡಲೇ ಮಾಂಸ ಸೇವಿಸುವುದನ್ನು ನಿಲ್ಲಿಸಬೇಕು ಮತ್ತು ಸೆಕ್ಸ್ ನಿಂದ ದೂರವಿದ್ದು, ಆಧ್ಯಾತ್ಮಿಕ ವಿಚಾರದಲ್ಲಿ ತೊಡಗಬೇಕು ಎಂದು ಸೂಚಿಸಲಾಗಿದೆ.
ತಾಯಿ ಮತ್ತು ಮಕ್ಕಳ ರಕ್ಷಣೆ ಎಂಬ ಕಿರು ಪುಸ್ತಕವನ್ನು ಆಯುಷ್ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಇಂದು ಬಿಡುಗಡೆ ಮಾಡಿದ್ದು, ಬೆಡ್ ರೂಮ್ ನಲ್ಲಿ ಸುಂದರ ಮತ್ತು ಉತ್ತಮವಾದ ಪೋಸ್ಟರ್ ಗಳನ್ನು ಹಾಕುವುದು ಉತ್ತಮ ಎಂದು ಕಿರು ಪುಸ್ತಕದಲ್ಲಿ ಹೇಳಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪೋಲೋ ಹೆಲ್ತ್ ಕೇರ್ ನ ಸ್ತ್ರೀರೋಗತಜ್ಞೆ ಮತ್ತು ಪ್ರಸೂತಿ ಶಾಸ್ತ್ರಜ್ಞೆ ಡಾ. ಮಾಳವಿಕ ಸಭರ್ವಾಲ್ ಅವರು, ಗರ್ಭಿಣಿ ಮಹಿಳೆಯರು ಮಾಂಸ ತಿನ್ನಬಾರದು ಎನ್ನುವುದು ಅವೈಜ್ಞಾನಿಕ. ಪ್ರೋಟೀನ್- ಅಪೌಷ್ಟಿಕತೆ ಕೊರತೆ ಮತ್ತು ರಕ್ತಹೀನತೆ ನಿವಾರಣೆಗೆ ಗರ್ಭಿಣಿಯರು ಮಾಂಸ ತಿನ್ನಬೇಕು. ಪ್ರೋಟೀನ್ ಮತ್ತು ಕಬ್ಬಿಣ ಅಂಶಕ್ಕೆ ಮಾಂಸ ಉತ್ತಮ ಮೂಲವಾಗಿದೆ. ಇದು ತರಕಾರಿಗಳಿಂದ ಸಿಗುವುದಿಲ್ಲ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com