ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್-2017)ಯ ಒಎಮ್ಆರ್ ಶೀಟ್ ನ್ನು ಬಿಡುಗಡೆ ಮಾಡಲಾಗಿದ್ದು, ಉತ್ತರ ಕೀಲಿಗಳು ಅದರ ಅಧಿಕೃತ ವೆಬ್ ಸೈಟ್ cbseneet.nic.inನಲ್ಲಿ ನಾಳೆ ಬಿಡುಗಡೆ ಆಗಲಿದೆ.
ಸುಪ್ರೀಂ ಕೋರ್ಟ್ ನಿನ್ನೆ ಮದ್ರಾಸ್ ಹೈಕೋರ್ಟ್ ನ ಆದೇಶವನ್ನು ರದ್ದುಮಾಡಿ ಫಲಿತಾಂಶವನ್ನು ಪ್ರಕಟಿಸುವಂತೆ ಸಿಬಿಎಸ್ಇಗೆ ಆದೇಶ ನೀಡಿತು.
ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದ ವಿವಾದದ ಕುರಿತು ಮಧ್ಯೆ ಪ್ರವೇಶಿಸಿ ಮದ್ರಾಸ್ ಮತ್ತು ಗುಜರಾತ್ ಹೈಕೋರ್ಟ್ ನಿಂದ ವಿಚಾರಣೆಯನ್ನು ವರ್ಗಾಯಿಸುವಂತೆ ಸಿಬಿಎಸ್ಇ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಸಿಬಿಎಸ್ಇ ಉತ್ತರಗಳನ್ನು ಇದೇ 15 ಮತ್ತು 16ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ಉತ್ತರಗಳ ಬಗ್ಗೆ ಆಕ್ಷೇಪಣೆಗಳಿದ್ದರೆ 1000 ರೂಪಾಯಿ ಶುಲ್ಕವನ್ನು ಪ್ರತಿ ಪ್ರಶ್ನೆಗೆ ಕಟ್ಟಿ ಸವಾಲು ಹಾಕಬಹುದಾಗಿದೆ.
ನೀಟ್ ಒಎಂಆರ್ ಶೀಟ್, ಪರೀಕ್ಷಿಸುವ ಕ್ರಮ ಹೀಗೆ:
ಮೊದಲ ಹಂತ: ಅಧಿಕೃತ ವೆಬ್ ಸೈಟ್ cbseneet.nic.inಗೆ ಭೇಟಿ ನೀಡಿ.
ಎರಡನೇ ಹಂತ: ಮುಖ ಪುಟದ ಬಲಗಡೆ ಒಎಂಆರ್ ಶೀಟ್ ಮತ್ತು ಉತ್ತರ ಕೀಲಿಗಳಿಗೆ ಕ್ಲಿಕ್ ಮಾಡಿದಾಗ ಪುಟ ತೆರೆದುಕೊಳ್ಳುತ್ತದೆ.
ಮೂರನೇ ಹಂತ: ಸೂಚನೆಗಳನ್ನು ಕೂಲಂಕಷವಾಗಿ ಓದಿ.
ನಾಲ್ಕನೇ ಹಂತ: ಮುಖ ಪುಟಕ್ಕೆ ಮತ್ತೆ ಹೋಗಿ ಒಎಂಆರ್ ಚಾಲೆಂಜ್ ಗೆ ಕ್ಲಿಕ್ ಮಾಡಿ.
ಐದನೇ ಹಂತ: ಹೊಸ ಪುಟ ತೆರೆದುಕೊಳ್ಳುತ್ತದೆ.ಅಲ್ಲಿ ಲಾಗಿನ್ ವಿವರಗಳನ್ನು ಕೊಡಿ.