ಸರ್ಕಾರಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡಸೌರ್ ಗೆ ಭೇಟಿ ನೀಡಲಿರುವ ಶಿವರಾಜ್ ಸಿಂಗ್ ರೈತ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮಂಡಸೌರ್ ನಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ನಿಯಂತ್ರಣಕ್ಕೆ ತರಲು ಉಪವಾಸ ನಿರಶನ ಆರಂಭಿಸಿದ್ದ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.11 ರಂದು ಉಪವಾಸವನ್ನು ಅಂತ್ಯಗೊಳಿಸಿದ್ದರು.
ರೈತರ ಸಾಲ ಮನ್ನ ಮಾಡಲು ಆಗ್ರಹಿಸಿ ಜೂ.1 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಂಡಸೌರ್ ನಲ್ಲಿ ಗೋಲಿಬಾರ್ ನಡೆದು ರೈತರು ಸಾವನ್ನಪ್ಪಿದ್ದರು. ಪರಿಣಾಮವಾಗಿ ರೈತರ ಪ್ರತಿಭಟನೆ ಗಲಭೆಗೆ ತಿರುಗಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜೂ.14 ರಂದು ಮಂಡಸೌರ್ ಗೆ ತೆರಳಲಿರುವ ಸಿಎಂ ಚೌಹ್ವಾಣ್ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.