ಮಾತುಕತೆಯೊಂದೇ ಪರಿಹಾರ, ಯುದ್ಧ ಬೇಕೆನ್ನುವವರನ್ನು ಗಡಿಗೆ ಕಳಿಸಬೇಕು: ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಯುದ್ಧದ ಬಗ್ಗೆ ಮಾತನಾಡಿದ್ದು, ಯುದ್ಧ ನಕಾರಾತ್ಮಕ ಭಾವನೆಯಿಂದ ಕೂಡಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಯುದ್ಧದ ಬಗ್ಗೆ ಮಾತನಾಡಿದ್ದು, ಯುದ್ಧ ನಕಾರಾತ್ಮಕ ಭಾವನೆಯಿಂದ ಕೂಡಿದೆ ಎಂದು ಹೇಳಿದ್ದಾರೆ. 
ಕಬೀರ್ ಖಾನ್ ನಿರ್ದೇಶನದ, ಬಿಡುಗಡೆಗೆ ಸಿದ್ಧವಾಗಿರುವ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಟ್ಯೂಬ್ ಲೈಟ್ ಯುದ್ಧಕ್ಕೆ ಸಂಬಂಧಿಸಿದ ಕಥೆ ಹೊಂದಿರುವ ಸಿನಿಮಾ ಆಗಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಯುದ್ಧದ ಬಗ್ಗೆ ಮಾತನಾಡಿದ್ದು, ವಿವಾದಗಳು, ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು, ಯುದ್ಧ ಬೇಕೆನ್ನುವವರು ಗಡಿಗೆ ತೆರಳಲಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. 
ಯುದ್ಧ ಬೇಕು ಎಂದು ಆಗ್ರಹಿಸುವವರನ್ನು ಯೋಧರ ಬದಲಿಗೆ ಗಡಿಗೆ ಕಳಿಸಬೇಕು, ಅಂತಹವರು ಹೆದರಿ ಕೊನೆಗೆ ಮಾತುಕತೆಯ ಮೂಲಕವೇ ವಿವಾದಗಳನ್ನು ಬಗೆಹರಿಸಿಕೊಳ್ಳುವಂತಾಗಲಿದೆ ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com