ನಾಗ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ: ಡಿಆರ್ ಡಿಒ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನಿನ್ನೆ ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು...
ನಾಗ್ ಕ್ಷಿಪಣಿ
ನಾಗ್ ಕ್ಷಿಪಣಿ
ಜೈಪುರ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನಿನ್ನೆ ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿರುವ 'ನಾಗ್' ಕ್ಷಿಪಣಿಯ(Anti-tank missile) ಪರೀಕ್ಷಾರ್ಥ ಉಡಾವಣೆಯನ್ನು ಮರುಭೂಮಿ ಪ್ರದೇಶ ರಾಜಸ್ತಾನದ ಪಶ್ಚಿಮ ವಲಯದಲ್ಲಿ ಯಶಸ್ವಿಯಾಗಿ ನೆರವೇರಿಸಿದೆ.
ಇಂದಿನ ಮಿಷನ್ ನಲ್ಲಿ ನಿಗದಿತ ಗುರಿಯನ್ನು ಕ್ಷಿಪಣಿ ಯಶಸ್ವಿಯಾಗಿ ನಾಶಪಡಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಮೂರನೇ ತಲೆಮಾರಿನ  ಆಂಟಿ ಟ್ಯಾಂಕ್ ಗೈಡೆಡ್ ಮಿಸ್ಸೈಲ್ ನಾಗ್ ನಲ್ಲಿ ಇಂಟಿಗ್ರೇಟೆಡ್ ಏವಿಯೋನಿಕ್ಸ್ ತಂತ್ರಜ್ಞಾನದೊಂದಿಗೆ ಹೆಚ್ಚು ಮುಂದುವರಿದ ಇಮೇಜಿಂಗ್ ಇನ್ಫ್ರಾರೆಡ್ ರಾಡಾರ್ (ಐಆರ್ಆರ್) ಅನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು, ಜೋಧ್ ಪುರದ ರಕ್ಷಣಾ ಪ್ರಯೋಗಾಲಯ, ಸೇನಾ ಪಡೆಯ ಹಿರಿಯ ಅಧಿಕಾರಿಗಳು ಈ ಪರೀಕ್ಷಾರ್ಥ ಉಡಾವಣೆಗೆ ಸಾಕ್ಷಿಯಾಗಿದ್ದರು. 
ರಕ್ಷಣಾ ಸಚಿವರ ವೈಜ್ಞಾನಿಕ ಸಲಹಗಾರರಾದ ಜಿ.ಸತೀಶ್ ರೆಡ್ಡಿ, ನಾಗಾ ಕ್ಷಿಪಣಿಯ ಯಶಸ್ವಿ ಹಾರಾಟ ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದು ಹೇಳಿದ್ದಾರೆ. 
ಕಾರ್ಯಾಚರಣೆಯ ಭಾಗದ ತಂಡಕ್ಕೆ ಡಿಆರ್ ಡಿಒ ಅಧ್ಯಕ್ಷ ಡಾ.ಎಸ್. ಕ್ರಿಸ್ಟೋಫರ್ ಅಭಿನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com