ವಸುಂಧರಾ ರಾಜೆ ಅವರನ್ನೇಕೆ ಟೀಕಿಸುವುದಿಲ್ಲ?: ಕುಮಾರ್ ವಿಶ್ವಾಸ್ ಗೆ ಆಪ್ ನಾಯಕನ ಪ್ರಶ್ನೆ

ಆಮ್ ಆದ್ಮಿ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಮುಂದುವರೆದಿದ್ದು, ರಾಜಸ್ಥಾನದ ಉಸ್ತುವಾರಿಯಾಗಿರುವ ಕುಮಾರ್ ವಿಶ್ವಾಸ್ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ದಿಲೀಪ್ ಪಾಂಡೆ ವಾಗ್ದಾಳಿ ನಡೆಸಿದ್ದಾರೆ.
ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್
Updated on
ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಮುಂದುವರೆದಿದ್ದು, ರಾಜಸ್ಥಾನದ ಉಸ್ತುವಾರಿಯಾಗಿರುವ ಕುಮಾರ್ ವಿಶ್ವಾಸ್ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ದಿಲೀಪ್ ಪಾಂಡೆ ವಾಗ್ದಾಳಿ ನಡೆಸಿದ್ದಾರೆ. 
ರಾಜಸ್ಥಾನದ ಉಸ್ತುವಾರಿಯಾಗಿರುವ ಕುಮಾರ್ ವಿಶ್ವಾಸ್ ಕಾಂಗ್ರೆಸ್ ಪಕ್ಷದ ಲೋಪಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಆದರೆ ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಅವರನ್ನು ಪ್ರಶ್ನಿಸುವುದಿಲ್ಲ ಏಕೆ ಎಂದು ಕೇಳಿದ್ದಾರೆ. ನೀವು ಕಾಂಗ್ರೆಸ್ ವಿರುದ್ಧ ಮಾತನಾಡುತ್ತೀರಿ, ಆದರೆ ವಸುಂಧರಾ ರಾಜೆ ವಿರುದ್ಧ ಮಾತ್ರ ಮಾತನಾಡುವುದಿಲ್ಲ ಏಕೆ ಎಂದು ಟ್ವಿಟರ್ ನಲ್ಲಿ ದಿಲೀಪ್ ಪಾಂಡೆ ಕೇಳಿದ್ದಾರೆ. 
ಸೇನಾ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಅವರ ಹೇಳಿಕೆಯನ್ನು ಖಂಡಿಸಿದ್ದ ಕುಮಾರ್ ವಿಶ್ವಾಸ್ ಕಾಂಗ್ರೆಸ್ ನಾಯಕನ ವಿರುದ್ಧ ಮಾತನಾಡಿದ್ದರು. ನಾನು ರಾಜಸ್ಥಾನದ ಬಿಜೆಪಿ ಸರ್ಕಾರವನ್ನು ಟೀಕಿಸುತ್ತೇನೆ ಆದರೆ ವಸುಂಧರಾ ರಾಜೆ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ ಎಂದು ಕುಮಾರ್ ವಿಶ್ವಾಸ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಂದರ್ಶನ ಪ್ರಸಾರವಾದ ಬೆನ್ನಲ್ಲೇ ಪಾಂಡೆ ಟ್ವೀಟ್ ನಲ್ಲಿ ಕುಮಾರ್ ವಿಶ್ವಾಸ್ ಅವರನ್ನು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com