ಅಯೋಧ್ಯೆಯಲ್ಲಿ ಇಫ್ತರ್ ಪಾರ್ಟಿ ಆಯೋಜಿಸಿದ ಆರ್ ಎಸ್ಎಸ್ ನ ಮುಸ್ಲಿಂ ಘಟಕ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್ಎಂ) ಉತ್ತರ...
ಮುಸ್ಲಿಂ ಘಟಕ ಆಯೋಜಿಸಿದ್ದ ಇಫ್ತರ್ ಕೂಟ
ಮುಸ್ಲಿಂ ಘಟಕ ಆಯೋಜಿಸಿದ್ದ ಇಫ್ತರ್ ಕೂಟ
ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್ಎಂ) ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ನಿನ್ನೆ ಇಫ್ತರ್ ಪಾರ್ಟಿಯನ್ನು ಆಯೋಜಿಸಿತ್ತು.
ನಿನ್ನೆಯ ಭೋಜನಕೂಟದಲ್ಲಿ ಆರ್ಎಸ್ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಘಟಕ 2002ರಲ್ಲಿ ಸ್ಥಾಪನೆಗೊಂಡಿತ್ತು. ಅಯೋಧ್ಯಾ ವಿವಾದ ಸೇರಿದಂತೆ ಮುಸಲ್ಮಾನ ಸಮುದಾಯದವರನ್ನು ತಲುಪಲು ಈ ಸಂಘಟನೆ ಸ್ಥಾಪಿಸಲಾಗಿತ್ತು. 
ಧಾರ್ಮಿಕ ವಿಧಿ ಪ್ರಕಾರ, ರಂಜಾನ್ ಸಮಯದಲ್ಲಿ ಮುಸ್ಲಿಮರು ಖರ್ಜೂರ ಅಥವಾ ಒಂಗು ಲೋಟ ನೀರನ್ನು ಇಫ್ತಾರ್ ಕೂಟದಲ್ಲಿ ಕುಡಿದು ಉಪವಾಸ ನಿಲ್ಲಿಸುತ್ತಾರೆ.
ಸಮುದಾಯದ ಇಫ್ತರ್ ಕೂಟದಲ್ಲಿ ಹಣ್ಣಿನ ಜ್ಯೂಸ್ ನ್ನು ನೀಡಲಾಗುತ್ತದೆ. ಇಫ್ತರ್ ಕೂಟವನ್ನು ಅನೇಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಆಯೋಜಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com