ರಾಷ್ಟ್ರಪತಿ ಚುನಾವಣೆ: ಸಂಸದರು, ಶಾಸಕರಿಗೆ ಪ್ರತ್ಯೇಕ ಬಣ್ಣದ ಬ್ಯಾಲೆಟ್ ಪೇಪರ್

ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮತ ಹಾಕಲು ಸಂಸದರಿಗೆ ಹಸಿರು...
ದೆಹಲಿಯ ರಾಷ್ಟ್ರಪತಿ ಭವನ(ಸಂಗ್ರಹ ಚಿತ್ರ)
ದೆಹಲಿಯ ರಾಷ್ಟ್ರಪತಿ ಭವನ(ಸಂಗ್ರಹ ಚಿತ್ರ)
ನವದೆಹಲಿ: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮತ ಹಾಕಲು ಸಂಸದರಿಗೆ ಹಸಿರು ಬಣ್ಣದ ಬ್ಯಾಲೆಟ್ ಪೇಪರ್ ಹಾಗೂ ಶಾಸಕರಿಗೆ ಗುಲಾಬಿ ಬಣ್ಣದ ಬ್ಯಾಲಟ್  ಪೇಪರ್ ಗಳನ್ನು  ನೀಡಲಾಗುತ್ತದೆ.
ಎನ್ ಡಿಎ ಮತ್ತು ವಿರೋಧ ಪಕ್ಷ ಪ್ರತ್ಯೇಕ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜುಲೈ 1ರೊಳಗೆ ನಾಮಪತ್ರ ಹಿಂಪಡೆಯದಿದ್ದರೆ ಚುನಾವಣಾ ಆಯೋಗ ಬ್ಯಾಲಟ್ ಪೇಪರ್ ಗಳ ಅಂತಿಮ ಮುದ್ರಣದ ಪ್ರಕ್ರಿಯೆಯನ್ನು ಆರಂಭಿಸಲಿದೆ.
ಶಾಸಕ ನೀಡುವ ಮತವು ಆತ ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಇರುತ್ತದೆ. ಆದರೆ ಸಂಸದನ ಮತದ ಮೌಲ್ಯವು ಬದಲಾಗುವುದಿಲ್ಲ. ಅದು 708 ಆಗಿರುತ್ತದೆ.
ಬೇರೆ ಬೇರೆ ಬಣ್ಣದ ಬ್ಯಾಲೆಟ್ ಪೇಪರ್ ಗಳು, ರಿಟರ್ನಿಂಗ್ ಆಫೀಸರ್ ಮೌಲ್ಯದ ಆಧಾರದ ಮೇಲೆ ಮತ ಎಣಿಕೆಗೆ ಸಹಾಯ ಮಾಡುತ್ತದೆ.
ಎಲೆಕ್ಟೊರಲ್ ಕಾಲೇಜ್ ನ ಒಟ್ಟು ಮೌಲ್ಯ 10,98,903 ಆಗಿದೆ. ಜುಲೈ 20ರಂದು ಮತ ಎಣಿಕೆಗೆ ಬ್ಯಾಲಟ್ ಬಾಕ್ಸ್ ಗಳನ್ನು ತರಲಾಗುತ್ತದೆ. 
ಚುನಾಯಿತ ಸಂಸದರು ಮತ್ತು ಶಾಸಕರನ್ನೊಳಗೊಂಡ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆ ಮೂಲಕ ಎಲೆಕ್ಟೊರಲ್ ಕಾಲೇಜ್ ರಾಷ್ಟ್ರಪತಿ ಚುನಾವಣೆ ಮಾಡುತ್ತದೆ. ದೇಶದಲ್ಲಿ ಒಟ್ಟು 4,120 ಶಾಸಕರು ಮತ್ತು 776 ಸಂಸದರು ಸೇರಿ ಒಟ್ಟು 4,896 ಮತದಾರರಿದ್ದಾರೆ. 233 ರಾಜ್ಯ ಸಭಾ ಸದಸ್ಯರು ಮತ್ತು 543 ಲೋಕಸಭಾ ಸದಸ್ಯರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com