ಸುಬ್ರತಾ ರಾಯ್ ಗೆ ಮತ್ತೆ 10 ದಿನ ಅವಕಾಶ ನೀಡಿದ ಸುಪ್ರೀಂ ಕೋರ್ಟ್

ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ 709, 82 ಕೋಟಿ ರುಪಾಯಿ ಠೇವಣಿ ಮಾಡಲು....
ಸುಬ್ರತಾ ರಾಯ್
ಸುಬ್ರತಾ ರಾಯ್
ನವದೆಹಲಿ: ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ 709, 82 ಕೋಟಿ ರುಪಾಯಿ ಠೇವಣಿ ಮಾಡಲು ಸುಪ್ರೀಂ ಕೋರ್ಟ್ ಮತ್ತೆ 10 ದಿನಗಳ ಕಾಲವಕಾಶ ನೀಡಿ, ಮಧ್ಯಂತರ ಜಾಮೀನು ಅವಧಿಯನ್ನು ಜುಲೈ 5ರ ವರೆಗೆ ವಿಸ್ತರಿಸಿದೆ.
ಸೇಬಿಗೆ ಜೂನ್.19ರೊಳಗಾಗಿ 1, 500 ಕೋಟಿ ರುಪಾಯಿ ಠೇವಣಿ ಮಾಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶಿಸುತ್ತಿತ್ತು. ಅಲ್ಲದೆ ಠೇವಣಿ ಮಾಡದಿದ್ದರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಎಚ್ಚರಿಸಿತ್ತು. 
ಪ್ರಕರಣ ಸಂಬಂಧ ಇಂದು ರಾಯ್ ಪರವಾಗಿ ವಿಚಾರಣೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಈಗಾಗಲೇ 790.18 ಕೋಟಿ ರುಪಾಯಿ ಸೇಬಿಗೆ ಠೇವಣಿ ಮಾಡಲಾಗಿದ್ದು, ಉಳಿದ ಹಣವನ್ನು ಠೇವಣಿ ಮಾಡಲು 10 ದಿನ ಕಾಲವಕಾಶ ಬೇಕು ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಸ್ರಾ ಹಾಗೂ ರಂಜನ್ ಗೋಗೋಯಿ ಅವರಿಗೆ ಮನವಿ ಮಾಡಿದರು. 
ಕಪಿಲ್ ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಸಬ್ರತಾ ರಾಯ್ ಮತ್ತೆ 10 ದಿನ ಕಾಲವಕಾಶ ನೀಡಿದೆ.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ ಬಂಧನಕ್ಕೆ ಆದೇಶ ನೀಡಿತ್ತು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ಸುಬ್ರತಾರಾಯ್ ಅವರು ಲಖನೌದಲ್ಲಿ ಪೊಲೀಸರ ಎದುರು ಶರಣಾಗಿ ಜೈಲು ಪಾಲಾಗಿದ್ದರು. 
2014ರಲ್ಲಿ ಬಂಧಿತರಾಗಿದ್ದ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂಕೋರ್ಟ್ ಕಳೆದ ವರ್ಷ ಮಧ್ಯಂತರ ಜಾಮೀನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com