ಲಾಲು ಕುಟುಂಬದ ವಿರುದ್ಧ ಬೇನಾಮಿ ವ್ಯವಹಾರ ಆರೋಪ; 180 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲುಗೆ ಐಟಿ ನೋಟಿಸ್

ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಹಾಗೂ ಮಕ್ಕಳಿಗೆ ಸೇರಿದ 12 ಪ್ಲಾಟ್ ಗಳು....
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
ನವದೆಹಲಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಹಾಗೂ ಮಕ್ಕಳಿಗೆ ಸೇರಿದ 12 ಪ್ಲಾಟ್ ಗಳು ಸೇರಿದಂತೆ ಒಟ್ಟು 9 ಕೋಟಿ ರುಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆ ಮಂಗಳವಾರ ಕ್ರಮ ತೆಗೆದುಕೊಂಡಿದೆ.
1 ಸಾವಿರ ಕೋಟಿ ರುಪಾಯಿ ಬೇನಾಮಿ ಆಸ್ತಿ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತಿಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್‌, ಲಾಲು ಪ್ರಸಾದ್‌ ಯಾದವ್‌ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ ಮೀಸಾ ಭಾರತಿ ವಿರುದ್ಧ ಆದಾಯ ತೆರಿಗೆ 9 ಕೋಟಿ ರು.ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಆಟ್ಯಾಚ್‌ಮೆಂಟ್‌ ನೋಟಿಸ್ ಜಾರಿ ಮಾಡಿದೆ.
ಮೀಸಾ ಭಾರತಿ ಮತ್ತು ಆಕೆಯ ಪತಿ ಶೈಲೇಶ್‌ ಕುಮಾರ್‌, ತೇಜಸ್ವಿ ಯಾದವ್‌, ರಾಬ್ರಿ ದೇವಿ ಮತ್ತು ಸಹೋದರಿಯರಾದ ರಾಗಿಣಿ ಮತ್ತು ಚಂದಾ ಯಾದವ್‌ ಅವರಿಗೆ ಸೇರಿದ ದೆಹಲಿ ಮತ್ತು ಪಾಟ್ನಾದಲ್ಲಿರುವ 12 ಭೂ ನಿವೇಶನಗಳು, ಕಟ್ಟಡಗಳು ಹಾಗೂ ಭೂಮಿ ಸೇರಿದಂತೆ ಒಟ್ಟು 9.32 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ತೆರಿಗೆ ಅಧಿಕಾರಿಗಳ ಪ್ರಕಾರ, ಈ ಆಸ್ತಿಯ ಪ್ರಸ್ತೂತ ಮಾರುಕಟ್ಟೆ ಮೌಲ್ಯ ಸುಮಾರು 170ರಿಂದ 180 ಕೋಟಿ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕಳೆದ ಮೇ 16ರಂದು ಐಟಿ ಇಲಾಖೆ ಲಾಲು ಪ್ರಸಾದ್‌ ಯಾದವ್‌ ಮತ್ತು ಅವರ ಮಕ್ಕಳಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಮೀಸಾ ಭಾರತಿ ಅವರು ಶಾಮೀಲಾಗಿರುವ ಬೇನಾಮಿ ಭೂ ವ್ಯವಹಾರಗಳಿಗೆ ಸಂಬಂಧಿಸಿ ದೆಹಲಿ ಮತ್ತು ಸುತ್ತಮುತ್ತಲಿನ 22 ಕಡೆ ದಾಳಿ ನಡೆಸಿತ್ತು.
ಹಣ ಪಾವತಿಸಿ ಆಸ್ತಿ ಖರೀದಿಸಿದ ಹೊರತಾಗಿಯೂ ಆ ಆಸ್ತಿಯನ್ನು ತನ್ನ  ಹೆಸರಲ್ಲಿ ಹೊಂದದಿರುವ ವ್ಯಕ್ತಿಯು ನಡೆಸುವ ವಹಿವಾಟನ್ನು ಬೇನಾಮಿ ವ್ಯವಹಾರ ಎಂದು ಪರಿಗಣಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com