ಆಸಿಡ್ ದಾಳಿ ಸಂತ್ರಸ್ತರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಬಡ್ತಿಯಲ್ಲಿ ಮೀಸಲಾತಿ

ಆಸಿಡ್ ದಾಳಿಗೊಳಗಾದವರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಸರ್ಕಾರಿ ಉದ್ಯೋಗಗಳಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಸಿಡ್ ದಾಳಿಗೊಳಗಾದವರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಪದೋನ್ನತಿ(ಬಡ್ತಿ)ಯಲ್ಲಿ ಆಸಿಡ್ ದಾಳಿಗೊಳಗಾದವರಿಗೆ ಮೀಸಲಾತಿ ನೀಡಲು ನಿರ್ಧರಿಸಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಕುರಿತು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು ಅದರಲ್ಲಿ ಆಸಿಡ್ ಸಂತ್ರಸ್ತರಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ, ಬಡ್ತಿಯಲ್ಲಿ ಕೋಟಾಗಳು ಮತ್ತು ವಯೋಮಿತಿಯಲ್ಲಿ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ.
ಈ ಸೌಲಭ್ಯವನ್ನು ಕೇಂದ್ರ ಸರ್ಕಾರ,  ಸ್ವಲೀನತೆ, ಮಾನಸಿಕ ಅಸ್ವಸ್ಥತೆಗಳು, ಬೌದ್ಧಿಕ ವಿಶೇಷಚೇತನರಿಗೆ ವಿಸ್ತರಿಸಲಿದೆ.
ವಿಶೇಷಚೇತನರಿಗೆ ಬಡ್ತಿಯಲ್ಲಿ ಕೋಟಾ ಮತ್ತು ಪ್ರಸ್ತಾವಿತ ಮೀಸಲಾತಿ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವುದರಿಂದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪ್ರಸ್ತಾವನೆಗಳು ಕೆಲವು ಕಾನೂನು ಅಡ್ಡಿ ಆತಂಕಗಳನ್ನು ಎದುರಿಸುವ ಸಾಧ್ಯತೆಯಿದೆ.
ಹುದ್ದೆ ಮೀಸಲಾತಿ ಕೇಂದ್ರ ಸರ್ಕಾರದ ಕಚೇರಿ ಸಹಾಯಕ ಹುದ್ದೆಯಿಂದ ಹಿಡಿದು ಭಾರತೀಯ ಆಡಳಿತ ಸೇವೆಯವರೆಗೆ ಇರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ನೇರ ನೇಮಕಾತಿಯಲ್ಲಿ ಒಟ್ಟು ಹುದ್ದೆಗಳ ಸಿಬ್ಬಂದಿ ಇಲಾಖೆ ರಚಿಸಿರುವ ಕರಡು ನೀತಿ ಬಗ್ಗೆ ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳ  ಅಭಿಪ್ರಾಯವನ್ನು ಮುಂದಿನ 15 ದಿನಗಳೊಳಗೆ ತಿಳಿಸುವಂತೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com