ನವದೆಹಲಿ: ಹಿಂದೂಗಳು ಯಾವತ್ತೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ, ಹಿಂದೂ ಭಯೋತ್ಪಾದಕರೆಂಬ ಯಾವುದೇ ಪರಿಭಾಷೆಯಿಲ್ಲ ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹಿಂದೂ ಭಯೋತ್ಪಾದನೆ ಎಂಬುದನ್ನು ಬಳಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪಾಕಿಸ್ತಾನ ತೊರೆದು ಭಾರತಕ್ಕೆ ಬಂದವರಿಗೆ ಹಿಂದೂ ಭಯೋತ್ಪಾದಕರೆಂಬ ಪಟ್ಟ ಕಟ್ಟಲಾಗಿದೆ, ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ, ಹಿಂದೂಗಳಿಂದ ಮಾತ್ರ ಪ್ರಪಂಚದಲ್ಲಿ ಭಯೋತ್ಪಾದನೆ ನಿರ್ಮೂಲನ ಸಾಧ್ಯ ಎಂದು ಅವರು ಹೇಳಿದ್ದಾರೆ.
ಹಲವು ಬಾರಿ ಮುಸ್ಲಿಂ ಭಯೋತ್ಪಾದನೆ ನಡೆದಿದ್ದರೂ ಕಾಂಗ್ರೆಸ್ ಅದನ್ನ ಹಿಂದೂ ಭಯೋತ್ಪಾದನೆ ಎಂಬುದಾಗಿ ಬಳಸುತ್ತಿದೆ ಎಂದು ಅವರು ದೂರಿದ್ದಾರೆ.