ರಾಜೀವ್ ಮೆಹರ್ಶಿ ಹಾಲಿ ಗೃಹ ಕಾರ್ಯದರ್ಶಿಯಾಗಿದ್ದು, ಆಗಸ್ಟ್ 30 ಕ್ಕೆ ಅಧಿಕಾರವಧಿ ಪೂರ್ಣಗೊಳಿಸಲಿದ್ದಾರೆ. ಆ.31 ಕ್ಕೆ ರಾಜೀವ್ ಗೌಬಾ ನೂತನ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1982 ರ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಗೌಬಾ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಗೃಹ ಇಲಾಖೆಯ ವಿಶೇಷ ಅಧಿಕಾರಿಯಾಗಿ (ಒಎಸ್ ಡಿ) ಈ ತಕ್ಷಣದಿಂದ ರಾಜೀವ್ ಗೌಬಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದೆ.