ಭದ್ರತಾ ಪಡೆಗಳ ತಾಳ್ಮೆ ಪರೀಕ್ಷಿಸಬೇಡಿ: ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ

ಶ್ರೀನಗರದ ನೌಹಟ್ಟಾದಲ್ಲಿರುವ ಜಮೀಯಾ ಮಸೀದಿ ಬಳಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಕಲ್ಲು ಹೊಡೆದು...
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
ಶ್ರೀನಗರ: ಶ್ರೀನಗರದ ನೌಹಟ್ಟಾದಲ್ಲಿರುವ ಜಮೀಯಾ ಮಸೀದಿ ಬಳಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಕಲ್ಲು ಹೊಡೆದು ಸಾಯಿಸಿದ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದು, ಭದ್ರತಾ ಪಡೆಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಭದ್ರತಾ ಪಡೆಗಳು ಕಾಶ್ಮೀರದ ಈಗಿನ ಪರಿಸ್ಥಿತಿಯಲ್ಲಿ ಗರಿಷ್ಠ ಸಂಯಮ ಪ್ರದರ್ಶಿಸುತ್ತಿದ್ದಾರೆ. ಅವರ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಕಾಶ್ಮೀರಿ ಕಲ್ಲು ತೂರಾಟಗಾರರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಸಹನೆಗೆ ನಿಮ್ಮ ಪ್ರತಿಕ್ರಿಯೆ ಈ ರೀತಿಯಾಗಿದ್ದರೆ ಮುಂಗೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಇನ್ನೂ ಎಷ್ಟು ದಿನ ಇದು ಹೀಗೆಯೇ ಮುಂದುವರೆಯಬೇಕು? ಎಂದು ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಪೊಲೀಸ್ ಜೀಪ್ ಕಂಡ ತಕ್ಷಣ ಜನರು ಹೆದರಿ ಓಡುವಂತಹ ಪರಿಸ್ಥಿತಿ ಬಂದೀತು ಎಂದು ಎಚ್ಚಿಸಿದ್ದಾರೆ.
ಇಂದು ಬೆಳಗಿನ ಜಾವ ರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೊಹಮ್ಮದ್ ಆಯುಬ್ ಪಂಡಿತ್ ಅವರನ್ನು ಉದ್ರಿಕ್ತ ಗುಂಪೊಂದು ಕಲ್ಲು ಹೊಡೆದು ಸಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com