ನೇಪಾಳಕ್ಕೆ ನೇರ ಬಸ್ ಸಂಪರ್ಕ ಕಲ್ಪಿಸಲು ಉತ್ತರಾಖಂಡ್ ರಾಜ್ಯದ ಚಿಂತನೆ

ಉತ್ತರಾಖಂಡ್ ನಿಂದ ನೇಪಾಳಕ್ಕೆ ನೇರ ಬಸ್ ಸಂಪರ್ಕ ಕಲ್ಪಿಸಲು ಉತ್ತರಾಖಂಡ್ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ದೆಹಲಿ-ನೇಪಾಳ ಬಸ್ ಸಂಪರ್ಕ
ದೆಹಲಿ-ನೇಪಾಳ ಬಸ್ ಸಂಪರ್ಕ
ಡೆಹ್ರಾಡೂನ್: ಉತ್ತರಾಖಂಡ್ ನಿಂದ ನೇಪಾಳಕ್ಕೆ ನೇರ ಬಸ್ ಸಂಪರ್ಕ ಕಲ್ಪಿಸಲು ಉತ್ತರಾಖಂಡ್ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 
ಈ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವರೆಗೂ ರಾಜ್ಯದಿಂದ ನೇಪಾಳಕ್ಕೆ ನೇರ ಬಸ್ ಸಂಪರ್ಕ ಇರಲಿಲ್ಲ. ಉತ್ತರಾಖಂಡ್ ನಿಂದ ನೇಪಾಳಕ್ಕೆ ತೆರಳಬೇಕಿದ್ದರೆ, ನವದೆಹಲಿ ಮೂಲಕ ಸಂಚರಿಸಬೇಕಿತ್ತು. ಆದರೆ ನೇಪಾಳ ಮೂಲದವರು ಉತ್ತರಾಖಂಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿ ನೇಪಾಳಕ್ಕೆ ನೇರ ಬಸ್ ಸಂಪರ್ಕವನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 
ನವದೆಹಲಿಯಿಂದ ಕಠ್ಮಂಡುವಿಗೆ ಮೂರು ಬಸ್ ಗಳು ಸಂಚರಿಸುತ್ತಿದ್ದು, ಈ ಪೈಕಿ 2 ಉತ್ತರಾಖಂಡ್ ರಸ್ತೆ ಸಾರಿಗೆಗೆ ಸಂಬಂಧಪಟ್ಟಿದ್ದಾಗಿದೆ. ನೇಪಾಳಕ್ಕೆ ಉತ್ತರಾಖಂಡ್ ನಿಂದ ನೇರ ಬಸ್ ಸಂಪರ್ಕ ಕಲ್ಪಿಸುವುದಕ್ಕೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಸರ್ಕಾರ ನೇರ ಸಂಪರ್ಕ ಕಲ್ಪಿಸುವ ಬಸ್ ಸೌಲಭ್ಯವನ್ನು ಪ್ರಾರಂಭಿಸುವುದರ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com