ಈ ಬಗ್ಗೆ ಇಂದು ಟಿವಿ ಚಾನೆಲ್ ವೊಂದಕ್ಕೆ ಪ್ರತಿಕ್ರಿಯಿಸಿದ ನಟ ದಿಲೀಪ್, ತಾವು ಅಮೆರಿಕಾ ಪ್ರವಾಸಕ್ಕೆ ಹೋಗುವ ಮುನ್ನ ಪೊಲೀಸರಿಗೆ ದೂರು ನೀಡಿದ್ದೆನು. ತಮ್ಮ ಸ್ನೇಹಿತ ನಾದಿರ್ಶನಿಗೆ ವಿಶ್ಣು ಎಂಬ ವ್ಯಕ್ತಿಯಿಂದ ಫೋನ್ ಬಂದಿತ್ತು. ಆತ ನಾನು ಪಲ್ಸರ್ ಸುನಿಯ ಜೈಲು ಸಂಗಾತಿ ಎಂದು ಪರಿಚಯಿಸಿಕೊಂಡನಂತೆ. ಆತ ನನಗೆ ಒಂದೂವರೆ ಕೋಟಿ ರೂಪಾಯಿ ಕೊಡಿ, ಇಲ್ಲದಿದ್ದರೆ ನಟ ದಿಲೀಪ್ ಹೆಸರನ್ನು ನಟಿಯ ಅಪಹರಣ ಕೇಸಿನಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದನಂತೆ.