ನೇಪಾಳ, ಭೂತಾನ್ ಗೆ ಪ್ರವಾಸ ಮಾಡಲು ಆಧಾರ್ ಸಂಖ್ಯೆ ಮಾನ್ಯತೆಯಲ್ಲ: ಗೃಹ ಸಚಿವಾಲಯ

ನೇಪಾಳ ಮತ್ತು ಭೂತಾನ್ ಗೆ ಪ್ರವಾಸ ಮಾಡುವ ಭಾರತೀಯರಿಗೆ ಆಧಾರ್ ಮಾನ್ಯವಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೇಪಾಳ ಮತ್ತು ಭೂತಾನ್ ಗೆ ಪ್ರವಾಸ ಮಾಡುವ ಭಾರತೀಯರಿಗೆ ಆಧಾರ್ ಮಾನ್ಯವಾದ ಗುರುತುಪತ್ರವಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ನೇಪಾಳ ಮತ್ತು ಭೂತಾನ್ ಗೆ ಪ್ರವಾಸ ಮಾಡಲು ಭಾರತೀಯರಿಗೆ ವೀಸಾದ ಅವಶ್ಯಕತೆಯಿರುವುದಿಲ್ಲ. ಭಾರತೀಯ ಪ್ರವಾಸಿಗರು ಮಾನ್ಯತೆ ಪಡೆದ ರಾಷ್ಟ್ರೀಯ ಪಾಸ್ ಪೋರ್ಟ್ ಅಥವಾ ಚುನಾವಣಾ ಆಯೋಗದ ಗುರುತು ಪತ್ರವನ್ನು ಹೊಂದಿದ್ದರೆ ಸಾಕು.
ಅದಕ್ಕಿಂತ ಮುಖ್ಯವಾಗಿ ಪ್ರಯಾಣವನ್ನು ಸುಗಮಗೊಳಿಸಲು 65 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 15 ವರ್ಷಕ್ಕಿಂತ ಕೆಳಗಿನವರು ತಮ್ಮ ವಯಸ್ಸು ಮತ್ತು ಗುರುತಿಗಾಗಿ ಯಾವುದಾದರೂ ದಾಖಲೆಗಳ ಜೊತೆಗೆ ತಮ್ಮ ಫೋಟೋವನ್ನು ತೋರಿಸಿದರೆ ಸಾಕಾಗುತ್ತದೆ. ಪ್ಯಾನ್ ಕಾರ್ಡು, ಚಾಲನಾ ಅನುಮತಿ ಪತ್ರ, ಕೇಂದ್ರ ಸರ್ಕಾರದ ಆರೋಗ್ಯ ಸೇವೆಯ ಕಾರ್ಡು ಮತ್ತು ರೇಷನ್ ಕಾರ್ಡುಗಳನ್ನು ತೋರಿಸಬಹುದು. ಆದರೆ ಆಧಾರ್ ಕಾರ್ಡನ್ನು ತೋರಿಸಿದರೆ ಆಗುವುದಿಲ್ಲ.
ಆಧಾರ್ ಕಾರ್ಡು ನೇಪಾಳ ಮತ್ತು ಭೂತಾನ್ ಗೆ ಪ್ರಯಾಣ ಮಾಡಲು ಮಾನ್ಯತೆ ಪಡೆದ ದಾಖಲೆಯಲ್ಲ ಎಂದು ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರದ ಹಲವು ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡು ಹೊಂದಿರುವುದು ಕಡ್ಡಾಯ ಎಂದು ಬಂದಿರುವ ಸಂದರ್ಭದಲ್ಲಿ ಗೃಹ ಸಚಿವಾಲಯದ ಈ ಸೂಚನೆ ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com