ಗುಲ್ಮಾರ್ಗ್ ಕೇಬಲ್ ಕಾರ್ ದುರಂತ 'ಆಕ್ಟ್ ಆಫ್ ಗಾಡ್'

ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್ ನಲ್ಲಿ ಸಂಭವಿಸಿದ ಕೇಬಲ್ ಕಾರ್ ದುರಂತ ಆಕ್ಟ್ ಆಫ್ ಗಾಡ್ ಎಂದು ಗೊಂಡಾಲಾ ಕೇಬಲ್ ಕಾರ್...
ಗುಲ್ಮಾರ್ಗ್ ಕೇಬಲ್ ಕಾರ್ ದುರಂತ
ಗುಲ್ಮಾರ್ಗ್ ಕೇಬಲ್ ಕಾರ್ ದುರಂತ
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್ ನಲ್ಲಿ ಸಂಭವಿಸಿದ ಕೇಬಲ್ ಕಾರ್ ದುರಂತ ಆಕ್ಟ್ ಆಫ್ ಗಾಡ್ ಎಂದು ಗೊಂಡಾಲಾ ಕೇಬಲ್ ಕಾರ್ ನಿರ್ವಹಿಸುತ್ತಿರುವ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಿಯಾಜ್ ಅಹಮ್ಮದ್ ಹೇಳಿದ್ದಾರೆ. 
ಭಾನುವಾರ ಗುಲ್ಮಾರ್ಗ್ ನಲ್ಲಿನ ಕೇಬಲ್ ಕಾರ್ ಮೇಲೆ ಬುಡ ಸಮೇತ ಮರ ಬಿದ್ದು ದೆಹಲಿಯ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದರು. 
ವೇಗವಾಗಿ ಗಾಳಿ ಬೀಸುವಾಗ ನಾವು ಗೊಂಡಾಲ ವನ್ನು ನಿರ್ವಹಿಸುವುದಿಲ್ಲ. ಅಲ್ಲಿ ಅಂತರ್ಗತ ಸುರಕ್ಷತೆ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಅತಿಯಾಗಿ ಗಾಳಿ ಬೀಸಿದಾಗ ಸ್ವಯಂಕೃತವಾಗಿ ಕಾರ್ಯಾಚರಣೆ ನಿಲ್ಲುತ್ತದೆ ಎಂದು ಅಹಮ್ಮದ್ ಹೇಳಿದ್ದಾರೆ. 
ನಿನ್ನೆ ಸಂಭವಿಸಿದ ದುರಂತ ದುರಾದೃಷ್ಟಕರ ಇದು ಆಕ್ಟ್ ಆಫ್ ಗಾಡ್ ಎಂದು ಹೇಳಿದ್ದಾರೆ. ಈ ದುರಂತ ಸಂಭವಿಸಿದಾಗ ಬೆಳಕು ಚನ್ನಾಗಿತ್ತು. ಆದರೆ ಆಕಸ್ಮಿಕವಾಗಿ ವೇಗವಾಗಿ ಗಾಳಿ ಬೀಸಲು ಶುರುವಾಯಿತು. ಇದರಿಂದಾಗಿ ದೊಡ್ಡದೊಂದು ಮರ ಬುಡ ಸಮೇತ ಕೇಬಲ್ ಕಾರ್ ಮೇಲೆ ಉರುಳಿ ಬಿದ್ದಿದೆ ಎಂದು ಹೇಳಿದರು. 
ಗುಲ್ಮಾರ್ಗ್ ಸ್ಕೀಯಿಂಗ್ ಮಾಡಲು ಯೋಗ್ಯವಾಗಿದ್ದು ಹೀಗಾಗಿ ಇಲ್ಲಿಗೆ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟದ ತುದಿ ತಲುಪುವುದಕ್ಕೆ ಕೇಬಲ್ ಕಾರ್ ಅಳವಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com