ಭಾರತವನ್ನು ಪಪ್ಪು ಮುಕ್ತ ಮಾಡುತ್ತೇನೆ: ಮೀರತ್ ನ ಮಾಜಿ ಕಾಂಗ್ರೆಸ್ ನಾಯಕನ ಪ್ರತಿಜ್ಞೆ

ವಾಟ್ಸ್ ಆಪ್ ಗ್ರೂಪ್ ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಹಾಸ್ಯ ಮಾಡಿದ್ದ ಮೀರತ್ ನ ಕಾಂಗ್ರೆಸ್ ನ ಮಾಜಿ ಮುಖಂಡ ಈಗ ಭಾರತವನ್ನು ಪಪ್ಪು ಮುಕ್ತ ಮಾಡುತ್ತೇನೆ ಎಂದು ಪ್ರತಿಜ್ಞೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on
ನವದೆಹಲಿ: ವಾಟ್ಸ್ ಆಪ್ ಗ್ರೂಪ್ ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಹಾಸ್ಯ ಮಾಡಿದ್ದ ಮೀರತ್ ನ ಕಾಂಗ್ರೆಸ್ ನ ಮಾಜಿ ಮುಖಂಡ ಈಗ ಭಾರತವನ್ನು ಪಪ್ಪು ಮುಕ್ತ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. 
ವಿನಯ್ ಪ್ರಧಾನ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಕ್ಕೆ ಕಾಂಗ್ರೆಸ್ ಪ್ರಧಾನ್ ಅವರನ್ನು ವಜಾಗೊಳಿಸಿತ್ತು. ಇದಾದ ಬಳಿಕ ಪ್ರಧಾನ್ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಂಡಿತ್ತು. ಈ ಬೆನ್ನಲ್ಲೇ ವಿನಯ್ ಪ್ರಧಾನ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಕಾಂಗ್ರೆಸ್ ನಲ್ಲಿ ಮುಖಸ್ತುತಿ ರಾಜಕೀಯ ನಡೆಯುತ್ತಿದೆ. 
ಗಾಂಧಿ ಕುಟುಂಬದವರನ್ನು ಟೀಕಿಸುವುದು ದೈವ ನಿಂದಯ ರೀತಿ ಪರಿಗಣಿಸಲಾಗುತ್ತದೆ ಎಂದು ವಿನಯ್ ಪ್ರಧಾನ್ ಹೇಳಿದ್ದಾರೆ. "ನಾನು ಪಕ್ಷಕ್ಕಾಗಿ ಇಡಿ ಜೀವನವನ್ನೇ ಕಳೆದಿದ್ದೇನೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಸ್ಪಷ್ಟನೆ ಕೇಳಬಹುದಿತ್ತು ಎಂದು ವಿನಯ್ ಪ್ರಧಾನ್ ಹೇಳಿದ್ದು, ಮೋದಿ ಅವರ ಮಹಾತ್ವಾಕಾಂಕ್ಷಿ ಕಾಂಗ್ರೆಸ್ ಮುಕ್ತ ಭಾರತ ಯೋಜನೆಯನ್ನು ರಾಹುಲ್ ಗಾಂಧಿ ಅವರೇ ಪೂರ್ಣಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com