ಜಿಎಸ್ ಟಿ: ಮೊದಲ ವರ್ಷ ತೆರಿಗೆ ವಿನಾಯಿತಿ ನೀಡಲು ಕೇಂದ್ರಕ್ಕೆ ವ್ಯಾಪಾರಿಗಳ ಆಗ್ರಹ

ಜು.30 ರ ಮಧ್ಯರಾತ್ರಿಯಿಂದ ಜಿಎಸ್ ಟಿ ಜಾರಿಗೆ ಬರಲಿದ್ದು, ಮೊದಲ ವರ್ಷ ತೆರಿಗೆ ವಿನಾಯಿತಿ ನೀಡುವಂತೆ ವ್ಯಾಪಾರಿ ಹಾಗೂ ಕೈಗಾರಿಕಾ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಜಿಎಸ್ ಟಿ
ಜಿಎಸ್ ಟಿ
ಹೈದರಾಬಾದ್: ಜು.30 ರ ಮಧ್ಯರಾತ್ರಿಯಿಂದ ಜಿಎಸ್ ಟಿ ಜಾರಿಗೆ ಬರಲಿದ್ದು, ಮೊದಲ ವರ್ಷ ತೆರಿಗೆ ವಿನಾಯಿತಿ ನೀಡುವಂತೆ ವ್ಯಾಪಾರಿ ಹಾಗೂ ಕೈಗಾರಿಕಾ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. 
ಆದಾಯವನ್ನು ಘೋಷಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ಹಾಗೂ ಕೈಗಾರಿಕಾ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದು, ಜಿಎಸ್ ಟಿ ಜಾರಿಯಾದ ನಂತರ ಮೊದಲ ವರ್ಷ ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿವೆ. 
ಜಿಎಸ್ ಟಿ ಜಾರಿಯಾದ ನಂತರ ಹಳೆಯ ತೆರಿಗೆ ವಿಧಾನಗಳು ರದ್ದಾಗಲಿದ್ದು, ಜಿಎಸ್ ಟಿ ಅಂಶಗಳ ಬಗ್ಗೆ ಸರ್ಕಾರಿ ನೌಕರರಿಗೇ ಹಲವು ಸಂದೇಹಗಳಿವೆ. ಹೊಸ ತೆರಿಗೆ ವಿಧಾನಕ್ಕೆ ವ್ಯಾಪಾರ ಹೊಂದಿಕೊಳ್ಳಬೇಕಾದರೆ ಕನಿಷ್ಠ 6 ತಿಂಗಳು ಬೇಕಾಗುತ್ತದೆ ಎಂದು ಆಂಧ್ರಪ್ರದೇಶದ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರವೀಂದ್ರ ಮೋದಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿ ಹಾಗೂ ಕೈಗಾರಿಕಾ ಸಂಸ್ಥೆಗಳು ಜಿಎಸ್ ಟಿ ಜಾರಿಯಾದ ನಂತರ ಮೊದಲ ವರ್ಷ ತೆರಿಗೆ ವಿನಾಯಿತಿ ನೀಡಲು ಆಗ್ರಹಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com