ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನ್ಯಾಷನಲ್ ಹೆರಾಲ್ಡ್ ಏಕತೆಗೆ ಸಾಕ್ಷಿಯಾಗಿದೆ, ವಿಭಜನೆಗಲ್ಲ: ಸೋನಿಯಾ ಗಾಂಧಿ

ಸರ್ವಾಧಿಕಾರದ ಬೆದರಿಕೆಗಳು ಹೆಚ್ಚುತ್ತಿರುವ ಮೂಲಕ ಭಾರತ ಗುರುತಿಸಿಕೊಳ್ಳುತ್ತಿದೆ.ಇಂತಹ ...
ನವದೆಹಲಿ: ಸರ್ವಾಧಿಕಾರದ ಬೆದರಿಕೆಗಳು ಹೆಚ್ಚುತ್ತಿರುವ ಮೂಲಕ ಭಾರತ ಗುರುತಿಸಿಕೊಳ್ಳುತ್ತಿದೆ.ಇಂತಹ ವಾತಾವರಣದ ಮಧ್ಯೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ  ದೇಶದ ಪೂರ್ವಜರಿಂದ ರೂಪಿಸಲ್ಪಟ್ಟ ವೈವಿಧ್ಯತೆ ಮತ್ತು ಸಹಬಾಳ್ವೆಗಳ ಕಲ್ಪನೆಗಳನ್ನು ಕಾಪಾಡಿಕೊಳ್ಳುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಅವರು ಇಂದು ದೆಹಲಿಯಲ್ಲಿ ನ್ಯಾಷನಲ್ ಹೆರಾಲ್ಡ್ ವೆಬ್ ಸೈಟ್ ನ ಮರು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದುಷ್ಕೃತ್ಯದ ಪಡೆಗಳ ಅಸಹಿಷ್ಣುತೆ, ಹಿಂಸಾಚಾರಗಳಿಂದ ಇಂದು ಭಾರತದ ಪ್ರಯತ್ನ ಮತ್ತು ಪರೀಕ್ಷಿತ ಆಲೋಚನೆಗಳನ್ನು ಮೂಲಭೂತವಾಗಿ ಕಿತ್ತೆಸೆಯಲಾಗಿದೆ. ಕಾನೂನು ಪಾಲಕರೇ ಇಂದು ನಮ್ಮ ದೇಶದಲ್ಲಿ ಹಿಂಸೆಯ ಸಂಸ್ಕೃತಿಯನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇವೆಲ್ಲದರ ಮಧ್ಯೆ ಏಕತೆ ಮತ್ತು ನ್ಯಾಯಕ್ಕೆ ಒಂದು ಪುರಾವೆಯಾಗಿದೆ. ಪ್ರಜಾಪ್ರಭುತ್ವವೆಂಬ ವಿನ್ಯಾಸದಲ್ಲಿ ನಮ್ಮ ದೇಶದ ದಕ್ಷತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸುವುದು ನಮ್ಮ ಗುರಿಯಾಗಿದೆ. ಮಹಾತ್ಮಾ ಗಾಂಧಿಯವರ ಸತ್ಯ, ಜವಹರಲಾಲ್ ನೆಹರೂರವರ ಬಹುಸಂಸ್ಕೃತ್ಯ, ಸರ್ದಾರ್ ಪಟೇಲ್ ರ ಐಕ್ಯತೆಯ ದೃಷ್ಟಿಕೋನ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದೃಷ್ಟಿಕೋನಗಳತ್ತ ನಾವಿಂದು ಹೋರಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

Related Stories

No stories found.

Advertisement

X
Kannada Prabha
www.kannadaprabha.com