ಅರ್ಜಿ ಸಲ್ಲಿಕೆ ಮೂಲಕ ಆಧಾರ್-ಪ್ಯಾನ್ ಸಂಖ್ಯೆ ಜೋಡಣೆಗೆ ಅವಕಾಶ

ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲು ಆನ್ ಲೈನ್ ಮತ್ತು ಎಸ್ಎಂಎಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಧಾರ್ ಸಂಖ್ಯೆಯನ್ನು  ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲು ಆನ್ ಲೈನ್ ಮತ್ತು ಎಸ್ಎಂಎಸ್ ವ್ಯವಸ್ಥೆಯನ್ನು ಹೊರತುಪಡಿಸಿ ಕೈಯಿಂದ ಅರ್ಜಿ ಬರೆಯುವ ಸೌಲಭ್ಯವನ್ನು ಕೂಡ ತೆರಿಗೆ ಪಾವತಿದಾರರಿಗೆ ಕಲ್ಪಿಸಲಾಗಿದ್ದು, ಅದಕ್ಕಾಗಿ ಆದಾಯ ತೆರಿಗೆ ಇಲಾಖೆ ಒಂದು ಪುಟದ ಅರ್ಜಿಯನ್ನು ಜಾರಿಗೆ ತಂದಿದೆ.
ಈ ಅರ್ಜಿಯಲ್ಲಿ ವ್ಯಕ್ತಿ, ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಕಾರ್ಡುಗಳಲ್ಲಿ ಹೆಸರನ್ನು ನಮೂದಿಸಿದಂತೆಯೇ ಅರ್ಜಿಯಲ್ಲಿ ಕೂಡ ಬರೆದು ಕೊಡಬೇಕು. ಅಲ್ಲದೆ ಅರ್ಜಿಯಲ್ಲಿ ನೀಡಿದ ಆಧಾರ್ ಸಂಖ್ಯೆಯನ್ನು ಬೇರೆ ಯಾವುದೇ ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಿಲ್ಲ ಎಂದು ಬರೆದ ಘೋಷಣೆಯಡಿ ಸಹಿ ಮಾಡಬೇಕು.
ಅರ್ಜಿಯಲ್ಲಿ ನಮೂದಿಸಿದ ಪ್ಯಾನ್ ಸಂಖ್ಯೆಯಲ್ಲದೆ ಬೇರೆ ಯಾವುದೇ ಪ್ಯಾನ್ ನ್ನು ನೀಡಲಾಗಿಲ್ಲ ಎಂದು ಕೂಡ ತೆರಿಗೆ ಪಾವತಿದಾರ ಘೋಷಣೆ ಮಾಡಬೇಕು.
ಆಧಾರ್ ಆಧಾರಿತ ನಿಖರತೆ ಉದ್ದೇಶಕ್ಕೆ ಒದಗಿಸಲಾಗುವ ವೈಯಕ್ತಿಕ ಗುರುತಿಸುವಿಕೆ ದಾಖಲೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ಗೌಪ್ಯವಾಗಿರುತ್ತದೆ. ಇದರಲ್ಲಿ ಸಂಶಯ ಬೇಡ ಎಂದು ತೆರಿಗೆ ಪಾವತಿದಾರರೊಬ್ಬರು ಹೇಳುತ್ತಾರೆ.
ಕಳೆದ ತಿಂಗಳು 29ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಅಧಿಸೂಚನೆ ಹೊರಡಿಸಿ, ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಗೆ ಜೋಡಿಸಬೇಕೆಂದು ಆದೇಶ ಹೊರಡಿಸಿತ್ತು. ಇಂದಿನಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಕಡ್ಡಾಯವಾಗಿದೆ. ತೆರಿಗೆ ಇಲಾಖೆ ಇತ್ತೀಚಿನ ದಾಖಲೆಗಳ ಪ್ರಕಾರ ಪ್ಯಾನ್ ಸಂಖ್ಯೆಗೆ 2.62 ಕೋಟಿ ಆಧಾರ್ ಸಂಖ್ಯೆಗಳನ್ನು ಇದುವರೆಗೆ ಜೋಡಿಸಲಾಗಿದೆ. 
ದೇಶದಲ್ಲಿ ಇದುವರೆಗೆ ಸುಮಾರು 25 ಕೋಟಿಗೂ ಅಧಿಕ ಮಂದಿಗೆ ಪ್ಯಾನ್ ಸಂಖ್ಯೆಯನ್ನು ಮತ್ತು 115 ಕೋಟಿಗೂ ಅಧಿಕ ಮಂದಿಗೆ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com