ಜಿಎಸ್ ಟಿ ಜಾರಿ ನಂತರ ರೈಲು ಪ್ರಯಾಣಿಕರಿಂದ ಹೆಚ್ಚು ಹಣ ಕೇಳಿದ ಟಿಟಿಇ: ವಿಡಿಯೋ ವೈರಲ್

ನಿನ್ನೆ ಮಧ್ಯರಾತ್ರಿ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು....
ಹೆಚ್ಚು ಹಣ ಕೇಳುತ್ತಿರುವ ಟಿಟಿಇ
ಹೆಚ್ಚು ಹಣ ಕೇಳುತ್ತಿರುವ ಟಿಟಿಇ
ನವದೆಹಲಿ: ನಿನ್ನೆ ಮಧ್ಯರಾತ್ರಿ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜಿಎಸ್ ಟಿಗೆ ಚಾಲನೆ ನೀಡಿದ ಬೆನ್ನಲ್ಲೇ ಗುಜರಾತ್ ಕ್ವೀನ್ ರೈಲಿನಲ್ಲಿ ರೈಲು ಟಿಕೆಟ್ ಪರಿಶೀಲಕ(ಟಿಟಿಇ) ಪ್ರಯಾಣಿಕರಿಂದ ಹೆಚ್ಚುವರಿಯಾಗಿ ತಲಾ 20 ರುಪಾಯಿ ಸಂಗ್ರಹಿಸಿದ್ದಾರೆ.
ಜಿಎಸ್ ಟಿ ಅಡಿ ತಲಾ 20 ರುಪಾಯಿ ಹೆಚ್ಚು ನೀಡಬೇಕು ಮತ್ತು ಅದಕ್ಕೆ ತಾನು ರಸೀದಿ ನೀಡುವುದಾಗಿ ಹೇಳಿದ ಟಿಟಿಯೊಂದಿಗೆ ಪ್ರಯಾಣಿಕರು ತೀವ್ರ ವಾಗ್ವಾದ ನಡೆಸುತ್ತಿರುವ ವಿಡಿಯೋವನ್ನು ಎಎನ್ಐ ಪೋಸ್ಟ್ ಮಾಡಿದೆ.
ಜಿಎಸ್ ಟಿ ಅಡಿ ಕೇಂದ್ರ ಸರ್ಕಾರ ಎಸಿ ರೈಲಿನ ಟಿಕೆಟ್ ದರದ ಮೇಲೆ ಶೇ.4.5ರಷ್ಟು ಇದ್ದ ತೆರಿಗೆಯನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com