ವಾರಣಾಸಿ: 'ರಾಷ್ಟ್ರೀಯವಾದ' ಭಾರತದಲ್ಲಿ ಮಾತ್ರ ಕೆಟ್ಟ ಪದ ಎಂದು ಪರಿಗಣಿಸಲಾಗುತ್ತಿದೆ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ರಾಮ್ ಜಾಸ್ ಕಾಲೇಜ್ ವಿವಾದವನ್ನು ಸೃಷ್ಟಿಸಿವೆ ಎಂದು ಗುರುವಾರ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ, ಈ ಚರ್ಚೆಯನ್ನು ಬಿಜೆಪಿ ಸರ್ಕಾರ ಆರಂಭಿಸಿಲ್ಲ. ಆದರೆ ರಾಷ್ಟ್ರೀಯವಾದ ಬಗ್ಗೆ ಯಾವಗ ಚರ್ಚೆ ನಡೆಯುತ್ತಿದಯೋ ಹಾಗ ನಮ್ಮ ಪಕ್ಷ ಭಾಗವಹಿಸುತ್ತದೆ ಎಂದಿದ್ದಾರೆ.
ರಾಷ್ಟ್ರೀಯವಾದ ಎಂದು ಉತ್ತಮ ಪದ. ಆದರೆ ನಮ್ಮ ದೇಶದಲ್ಲಿ ಅದನ್ನು ಕೆಟ್ಟ ಪದ ಎಂದು ಪರಿಗಣಿಸಲಾಗುತ್ತಿದೆ ಎಂದರು.
ಬಿಹಾರ ವಿಧಾನಸಭೆ ಚುನಾವಣೆ ವೇಳೆ ಪ್ರಶಸ್ತಿ ವಾಪಸ್ ನೀಡುವ ವಿವಾದ ಸೃಷ್ಟಿಸಿದಂತೆ ಈಗ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಪ್ರತಿಪಕ್ಷಗಳು ರಾಮ್ ಜಾಸ್ ಕಾಲೇಜ್ ವಿವಾದ ಸೃಷ್ಟಿಸುವ ಮೂಲಕ ರಾಷ್ಟ್ರೀಯತೆಯ ಚರ್ಚೆ ಹುಟ್ಟು ಹಾಕಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.