ಏಪ್ರಿಲ್-1 ರಿಂದ ಪಂಜಾಬ್ ನಲ್ಲಿ 1,400 ಸಾರಾಯಿ ಅಂಗಡಿಗಳು ಬಂದ್

ಪಂಜಾಬ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುಮಾರು 1,400 ಸಾರಾಯಿ ಅಂಗಡಿಗಳು ಏಪ್ರಿಲ್ 1 ರಿಂದ ಬಂದ್ ಆಗಲಿವೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡಿಗಡ: ಪಂಜಾಬ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುಮಾರು 1,400 ಸಾರಾಯಿ ಅಂಗಡಿಗಳು ಏಪ್ರಿಲ್ 1 ರಿಂದ ಬಂದ್ ಆಗಲಿವೆ.

ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ ಈ ಸಾರಾಯಿ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಅಬಕಾರಿ ವಲಯದಿಂದಲೇ ಪಂಜಾಬ್ ಗೆ ಹೆಚ್ಚಿನ ವರಮಾನ ಬರುತ್ತಿತ್ತು.

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ 500 ಮೀಟರ್ ಒಳಗೆ ಯಾವುದೇ ಮದ್ಯದಂಗಡಿ ಇರಕೂಡದೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿಲ್ಲ, ಬದಲಿಗೆ ಶಾಶ್ವತವಾಗಿ ಮುಚ್ಚಲಾಗುತ್ತಿದೆ.

ಆದೇಶದ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೇ ಮಾರ್ಚ್ 20 ರ  ಒಳಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂ ಆದೇಶ ಕೇವಲ ಮದ್ಯದಂಗಡಿಗಳಿಗೆ ಮಾತ್ರ, ಹೀಗಾಗಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ನಿಟ್ಟುಸಿರುಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com