
ನವದೆಹಲಿ: ಪ್ರಪಂಚದ ಅತಿ ತೂಕದ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಈಜಿಪ್ಟ್ನ ಮಹಿಳೆ ಇಮಾನ್ ಅಹ್ಮದ್ ಒಂದು ತಿಂಗಳಲ್ಲೇ ಬರೋಬ್ಬರೀ 120 ಕೆಜಿ ತೂಕ ಕಳೆದುಕೊಂಡಿದ್ದಾರೆ.
500 ಕೆಜಿ ತೂಕವಿದ್ದ ಇಮಾನ್ ಮುಂಬಯಿಯ ಸೈಫೀ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 25 ವರ್ಷಗಳ ನಂತರ ಮೊದಲ ಬಾರಿಗೆ 120 ಕೆಜಿ ತೂಕ ಕಳೆದುಕೊಂಡು 380 ಕೆಜಿಗೆ ಇಳಿದಿದ್ದಾರೆ.
ಸದ್ಯ ಇಮಾನ್ ತನ್ನಷ್ಟಕ್ಕೆ ತಾನೇ ಕುಳಿತು ಕೊಳ್ಳಲು ಶಕ್ತರಾಗಿದ್ದಾರೆ. ನಾವು ಕೇವಲ 50 ಕೆಜಿ ತೂಕ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದವು, ಆದರೆ 120 ಕೆಜಿ ತೂಕ ಕಡಿಮೆಯಾಗಿರುವುದು ನಮಗೆ ಆಶ್ಚರ್ಟ ತಂದಿದೆ ಎಂದು ವೈದ್ಯ ಡಾ. ಮುಫಾಜಲ್ ಲಕ್ಡಾವಾಲಾ ತಿಳಿಸಿದ್ದಾರೆ.
ಲಿಕ್ವಿಡ್ ಆಹಾರ ಮಾತ್ರ ನೀಡುತ್ತಿದ್ದು ಪ್ರತಿನಿತ್ಯ ಫಿಜಿಯೋಥೆರಪಿ ಮಾಡಲಾಗುತ್ತಿದೆ. ಇಮಾನ್ ಅಹ್ಮದ್ ಮತ್ತಷ್ಟು ತೂಕ ಕಡಿಮೆಯಾಗಲಿದ್ದಾರೆ. ಚಿಕಿತ್ಸೆಗೆ ಇಮಾನ್ ದೇಹ ಸ್ಪಂದಿಸುತ್ತಿದ್ದು, ಅವರಿಗೆ ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ 11 2017 ರಂದು ಇಮಾನ್ ತಮ್ಮ ತೂಕ ಇಳಿಸಿಕೊಳ್ಳಲು ಈಜಿಪ್ಟ್ ನಿಂದ ಮುಂಬಯಿಗೆ ಆಗಮಿಸಿದ್ದಾರೆ.
Advertisement