
ತಿರುವನಂತಪುರ: ಕೇರಳದ ಕಣ್ಣೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಸುಶೀಲ್ ಮೇಲೆ ಬುಧವಾರ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಕೇರಳದ ಒಲಚೇರಿ ಕಾವು ಎಂಬ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಿಂದ ಗಂಭೀರ ಗಾಯಗೊಂಡಿರುವ ಸುಶೀಲ್ ಅವರನ್ನು ಕೋಜಿಕೋಡ್ ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಯ ಹಿಂದೆ ಸಿಪಿಐ(ಎಂ) ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಬಿಜೆಪಿಯ ಆರೋಪ ನಿರಾಧಾರವಾದದ್ದು ಎಂದು ಸಿಪಿಐ(ಎಂ) ಹೇಳಿದೆ. ಇದು ಬಿಜೆಪಿಯೊಳಗಿನ ಆಂತರಿಕ ಕಲಹದ ಪಲಿತಾಂಶ ಎಂದು ಸಿಪಿಐ(ಎಂ) ತಿರುಗೇಟು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement