ನವದೆಹಲಿ: ತಮ್ಮ ಆಸ್ತಿ ಬಹಿರಂಗ ವಿಚಾರದಲ್ಲಿ ನಿಖರತೆ ಇದೆಯೇ ಅಥವಾ ಇಲ್ಲವೇ ಎಂದು ಸುಪ್ರೀಂ ಕೋರ್ಟ್ ಗುರುವಾರ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಪ್ರಶ್ನಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಸಮೂಹ ಬ್ಯಾಂಕುಗಳು, ವಿಜಯ್ ಮಲ್ಯರಿಂದ 9,000 ಕೋಟಿ ಮೌಲ್ಯದ ಸಾಲವನ್ನು ಹಿಂಪಡೆಯುವಂತೆ ಮಾಡಿರುವ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಲ್ಯ ಅವರಿಗೆ ಈ ಪ್ರಶ್ನೆ ಕೇಳಿದೆ.
ಬ್ರಿಟನ್ ಮೂಲದ ಡಿಯಾಜಿಯೊದಿಂದ ಪಡೆದ 40 ದಶಲಕ್ಷ ಅಮೆರಿಕನ್ ಡಾಲರ್ ನ್ನು ಹಿಂತಿರುಗಿಸುವಂತೆ ಮಲ್ಯ ಅವರಿಗೆ ಆದೇಶಿಸಬೇಕೆಂದು ಬ್ಯಾಂಕು ಸುಪ್ರೀಂ ಕೋರ್ಟ್ ನ್ನು ಕೋರಿದೆ.