ಬ್ಯಾಂಕ್ ಗಳಲ್ಲಿ ಜಮೆಯಾದ 500, 1000 ರೂ ನೋಟುಗಳ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ನೀಡುವುದು ಕಷ್ಟ ಸಾಧ್ಯ, ಬ್ಯಾಂಕ್ ಗಳಲ್ಲಿ ಜಮೆಯಾಗಿರುವ ಪ್ರತಿ ನೋಟುಗಳ ಅಸಲಿಯತ್ತನ್ನು ಪರೀಕ್ಷಿಸಬೇಕು, ನಕಲಿ ಹಾಗೂ ಅಸಲಿ ನೋಟುಗಳನ್ನು ಬೇರ್ಪಡಿಸಬೇಕಾಗಿದ್ದು, ಇದೊಂದು ದೀರ್ಘಾವಧಿ ಪ್ರಕ್ರಿಯೆಯಾಗಿದ್ದು ಈಗಲೇ ಹೇಳುವುದು ಕಷ್ಟ ಸಾಧ್ಯ. ಆರ್ ಬಿಐ ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.