ಸುಪ್ರೀಂ ಕೋರ್ಟ್ ಮಾಸ್ಟರ್ ಅಲ್ಲ, ಹೈಕೋರ್ಟ್ ಸರ್ವೆಂಟ್ ಅಲ್ಲ: ವಾರೆಂಟ್ ಬಗ್ಗೆ ನ್ಯಾ.ಕರ್ಣನ್ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್ ತಮಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿರುವುದರ ಬಗ್ಗೆ ಸ್ವತಃ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಸಿ ಕರ್ಣನ್ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್ ಕ್ರಮವನ್ನು ಅಸಾಂವಿಧಾನಿಕ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಸುಪ್ರೀಂ ಕೋರ್ಟ್ ವಾರೆಂಟ್ ಅಸಾಂವಿಧಾನಿಕ: ನ್ಯಾ.ಕರ್ಣನ್
ನನ್ನ ವಿರುದ್ಧ ಸುಪ್ರೀಂ ಕೋರ್ಟ್ ವಾರೆಂಟ್ ಅಸಾಂವಿಧಾನಿಕ: ನ್ಯಾ.ಕರ್ಣನ್
ನವದೆಹಲಿ: ಸುಪ್ರೀಂ ಕೋರ್ಟ್ ತಮಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿರುವುದರ ಬಗ್ಗೆ ಸ್ವತಃ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಸಿ ಕರ್ಣನ್ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್ ಕ್ರಮವನ್ನು ಅಸಾಂವಿಧಾನಿಕ ಎಂದು ಹೇಳಿದ್ದಾರೆ. 
ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ನಿಂದನೆ ಪ್ರಕರಣ ದಾಖಲಾಗಿದ್ದು, ಜಸ್ಟಿಸ್‌ ಕರ್ಣನ್‌ ಅವರನ್ನು ಕಳೆದ ಫೆಬ್ರವರಿಯಲ್ಲಿ   ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಖುದ್ದು ಹಾಜರಾಗುವಲ್ಲಿ ವಿಫಲರಾಗಿದ್ದ ಹೆಚ್ ಸಿ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿತ್ತು. 
ವಾರಂಟ್ ಅನ್ನು  ಪಶ್ಚಿಮ ಬಂಗಾಳ ಡಿಜಿಪಿ ಅವರು ಖುದ್ದಾಗಿ ಹೆಚ್ ಸಿ ಕರ್ಣನ್ ಅವರಿಗೆ ನೀಡಿ, ಮಾರ್ಚ್ 31ರೊಳಗೆ ವಿಚಾರಣೆಗೆ ಹಾಜರು ಪಡಿಸುವಂತೆ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ಣನ್, ಸುಪ್ರೀಂ ಕೋರ್ಟ್ ನನಗೆ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿರುವುದು ಅಸಾಂವಿಧಾನಿ, 
ಉದ್ದೇಶಪೂರ್ವವಾಗಿ ನನ್ನ ವಿರುದ್ಧ ಆದೇಶ ಹೊರಡಿಸಲಾಗಿದ್ದು, ನನ್ನ ವೃತ್ತಿ ಜೀವನವನ್ನು ಹಾಳು ಮಾಡಲು ಈ ರೀತಿಯ ಆದೇಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಮಾಸ್ಟರ್ ಅಲ್ಲ, ಹೈಕೋರ್ಟ್ ಸರ್ವೆಂಟ್ ಅಲ್ಲ ಎಂದು ನ್ಯಾ.ಕರ್ಣನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com