90 ಮತಗಳಿಗೆ ಧನ್ಯವಾದ: ರಾಜಕೀಯ ತೊರೆದ ಉಕ್ಕಿನ ಮಹಿಳೆ

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಪಿಆರ್‌ಜೆಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇರೋಮ್ ಶರ್ಮಿಳಾ...
ಇರೋಮ್ ಶರ್ಮಿಳಾ
ಇರೋಮ್ ಶರ್ಮಿಳಾ

ನವದೆಹಲಿ: ಸೇನಾ ವಿಶೇಷಾಧಿಕಾರ ಕಾಯ್ದೆ ರದ್ದತಿಗಾಗಿ 16 ವರ್ಷಗಳ ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ರಾಜಕೀಯ ಪ್ರವೇಶಿಸಿ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಪಿಆರ್‌ಜೆಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇರೋಮ್ ಶರ್ಮಿಳಾ ಅವರಿಗೆ ಸಿಕ್ಕಿದ್ದು ಕೇವಲ 90 ಮತಗಳು! ತಾವು ಪಡೆದ 90 ಮತಗಳಿಗೆ ಶರ್ಮಿಳಾ ಜನತೆಗೆ ಧನ್ಯವಾಗದ ಅರ್ಪಿಸಿದ್ದಾರೆ.

16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹದ ಮೂಲಕ ಗಳಿಸಲು ಸಾಧ್ಯವಾಗದೇ ಇದ್ದುದನ್ನು ರಾಜಕೀಯ ಹೋರಾಟ ಮೂಲಕ ಗಳಿಸಬಹುದು ಎಂಬ ಉದ್ದೇಶದಿಂದಲೇ ಶರ್ಮಿಳಾ ಕಳೆದ ವರ್ಷ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ರಾಜಕೀಯಕ್ಕೆ ಪ್ರವೇಶಿಸಿದರು.ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿದ್ದರು.

ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಎಂಬ ಸ್ವತಂತ್ರ ಪಕ್ಷವನ್ನು ಹುಟ್ಟುಹಾಕಿದ ಶರ್ಮಿಳಾ, ವಿಧಾನಸಭಾ ಚುನಾವಣೆಯಲ್ಲಿ ಮಣಿಪುರ ಮುಖ್ಯಮಂತ್ರಿ  ಇಬೋಬಿ ಸಿಂಗ್ ಅವರ ವಿರುದ್ಧ ತೋಬಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಶರ್ಮಿಳಾ ಅವರಿಗೆ ಸಿಕ್ಕಿದ್ದು ಕೇವಲ 90 ಮತಗಳು.

ಮಣಿಪುರದ ಜನರಿಗಾಗಿ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ, ರಾಜ್ಯದ ಏಳಿಗೆಗಾಗಿ ಶ್ರಮಿಸಿದ್ದ ಉಕ್ಕಿನ ಮಹಿಳೆ ಗೆ ಜನರ ಬೆಂಬಲ ಸಿಗದೇ ಹೋಯಿತು. ಈ ಪರಾಭವದ ಮೂಲಕ ಶರ್ಮಿಳಾ ಅವರ ರಾಜಕೀಯ ಕನಸು ಕೂಡಾ ನುಚ್ಚುನೂರಾಯಿತು.

ನಾನು ಇನ್ನು ಮಂದೆ ಇಲ್ಲಿ ಕಾಲಿಡಲ್ಲ ಎಂದು ಹೇಳಿ ಶರ್ಮಿಳಾ ಹೊರ ನಡೆದಾಗ ಅವರ ಕಣ್ಣಲ್ಲಿ ನೀರಿತ್ತು. ರಾಜಕೀಯ ರಂಗದಲ್ಲಿ ತಮಗೆ ಹಿನ್ನಡೆಯಾಗಿದ್ದಕ್ಕೆ ನೊಂದಿರುವ ಶರ್ಮಿಳಾ ತಮ್ಮ ಫೇಸ್‍ಬುಕ್‍ನಲ್ಲಿ  '90 ಮತಗಳಿಗೆ ಧನ್ಯವಾದ' ಎಂದು ಬರೆದು ರಾಜಕೀಯದ ಹಾದಿ ತೊರೆದಿದ್ದಾರೆ. ಮುಂದೆ ಶರ್ಮಿಳಾ ಯಾವ ಕ್ಷೇತ್ರ ಆರಿಸಿಕೊಂಡು ಏನು ಮಾಡಲಿದ್ದಾರೆ ಎಂಬ ಬಗ್ಗೆ ಇನ್ನೂ ಎಲ್ಲಿಯೂ ಪ್ರಕಟಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com