ಫೆಬ್ರವರಿಯ ಸಗಟು ಹಣದುಬ್ಬರ ದರ ಶೇ.6.55 ಕ್ಕೆ ಏರಿಕೆ

ಭಾರತದ ವಾರ್ಷಿಕ ಸಗಟು ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಶೇ.5.25 ರಿಂದ ಶೇ.6.55 ಕ್ಕೆ ಏರಿಕೆಯಾಗಿದೆ.
ಹಣದುಬ್ಬರ
ಹಣದುಬ್ಬರ
ನವದೆಹಲಿ: ಭಾರತದ ವಾರ್ಷಿಕ ಸಗಟು ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಶೇ.5.25 ರಿಂದ ಶೇ.6.55 ಕ್ಕೆ ಏರಿಕೆಯಾಗಿದೆ. 
ಮಾ.14 ರಂದು ಪ್ರಕಟವಾದ ಅಂಕಿ-ಅಂಶಗಳ ಪ್ರಕಾರ ಜನವರಿಯಿಂದ ಪ್ರಸ್ತುತ ಪರಿಶೀಲನೆಯಲ್ಲಿರುವ ತಿಂಗಳ ವರೆಗೆ ಆಹಾರ ಪದಾರ್ಥಗಳ ಹಣದುಬ್ಬರ ದರ ಶೇ.2.69 ರಷ್ಟು ಏರಿಕೆಯಾಗಿದೆ. ಪ್ರಾಥಮಿಕ ಸರಕುಗಳ ಹಣದುಬ್ಬರ ಫೆಬ್ರವರಿ ತಿಂಗಳಲ್ಲಿ ಶೇ.5 ರಷ್ಟು ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. 
ಈರುಳ್ಳಿ ಹಣದುಬ್ಬರ ಶೇ. (-)18.85 ರಷ್ಟು ಕಡಿಮೆಯಾಗಿದ್ದು, ಆಲುಗಡ್ಡೆಯ ಹಣದುಬ್ಬರ ಶೇ.(-)8.84 ರಷ್ಟು ಕಡಿಮೆಯಾಗಿದ್ದರೆ ಒಟ್ಟಾರೆ ತರಕಾರಿಗಳ ಬೆಲೆ ಶೇ. (-)8.05 ರಷ್ಟು, ಬೇಳೆಕಾಳುಗಳ ಹಣದುಬ್ಬರ ಶೇ.(-)0.79  ಕಡಿಮೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com