ಮತಯಂತ್ರ ದುರ್ಬಳಕೆಯಿಂದ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವು: ಕೇಜ್ರಿವಾಲ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮತಯಂಟ್ರ ದುರ್ಬಳಕೆ ಸಹಕಾರಿಯಾಗಿದೆ ಎಂಬ ಆರೋಪದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವಿಗೂ ಮತಯಂತ್ರ ದುರ್ಬಳಕೆಯೇ
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮತಯಂಟ್ರ ದುರ್ಬಳಕೆ ಸಹಕಾರಿಯಾಗಿದೆ ಎಂಬ ಆರೋಪದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವಿಗೂ ಮತಯಂತ್ರ ದುರ್ಬಳಕೆಯೇ ಕಾರಣ ಎಂದು ಆರೋಪಿಸಿದ್ದಾರೆ. 
ಪಕ್ಷದ ಬೆಂಬಲಿಗರು ಡಜನ್ ಗಟ್ಟಲೆ ಇರುವ ಹಲವು ಬೂತ್ ಗಳಲ್ಲಿ ತಮ್ಮ ಪಕ್ಷಕ್ಕೆ ಕೇವಲ 2-3 ಮತಗಳು ಬಂದಿದೆ. ಆಮ್ ಆದ್ಮಿ ಪಕ್ಷಕ್ಕೆ ಶೇ.20-25 ರಷ್ಟು ಮತಗಳು ಬಂದಿದ್ದು, ವೋಟಿಂಗ್ ಮಷೀನ್ ನ್ನು ದುರ್ಬಳಕೆ ಮಾಡುವ ಮೂಲಕ  ಅದನ್ನು ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿ ಕೂಟಕ್ಕೆ ಹೋಗುವಂತೆ ಮಾಡಲಾಗಿದೆ ಎಂಬ ಅನುಮಾನವಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 
ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಶೇ.38.4 ರಷ್ಟು ಮತಗಳು ಬಂದಿದ್ದರೆ ಪ್ರಧಾನ ಪ್ರತಿಪಕ್ಷ ಆಮ್ ಆದ್ಮಿ ಪಕ್ಷ ಶೇ.23.5 ರಷ್ಟು ಮತಗಳಿಸಿದ್ದು ಆಪ್ ಗಿಂತಲೂ ಹೆಚ್ಚು ಅಂದರೆ ಶೇ.30.5 ರಷ್ಟು ಮತವನ್ನು ಎಸ್ಎಡಿ-ಬಿಜೆಪಿ ಮೈತ್ರಿಕೂಟ ಗಳಿಸಿದ್ದು, ಮತಯಂತ್ರ ದುರ್ಬಳಕೆಯಿಂದ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com