ಚೆನ್ನೈ: ಎಐಎಡಿಎಂಕೆಯ ಒ.ಪನ್ನೀರ್ ಸೆಲ್ವಂ ನೇತೃತ್ವದ ಬಂಡಾಯ ಬಣ ಏಪ್ರಿಲ್ 12ರಂದು ಚೆನ್ನೈಯ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಹಿರಿಯ ಮುಖಂಡ ಇ.ಮಧುಸೂದನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಚೆನ್ನೈನ ಗ್ರೀನ್ ವೇ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯ ನಂತರ ಪನ್ನೀರ್ ಸೆಲ್ವಂ ಅಭ್ಯರ್ಥಿಯ ಘೋಷಣೆ ಮಾಡಿದರು.
1991ರಲ್ಲಿ ಮಧುಸೂಧನ್ ಈ ಕ್ಷೇತ್ರದಿಂದ ಶಾಸಕನಾಗಿ ಆರಿಸಿ ಬಂದಿದ್ದರು. ಬಂಡಾಯ ಬಣ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಆರ್.ಕೆ.ನಗರ ಕ್ಷೇತ್ರದ ಉಪ ಚುನಾವಣೆ ರಂಗೇರಿದೆ.