ಮಣಿಪುರ ರಾಜವಂಶಸ್ಥರ ನೆರವು ಕೇಳಿದ ಸಿಎಂ

ರಾಜ್ಯದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟೇತರ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವುದಕ್ಕೆ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜವಂಶಸ್ಥರ ಸಹಾಯ ಕೇಳಿದ್ದಾರೆ.
ಬಿರೇನ್ ಸಿಂಗ್
ಬಿರೇನ್ ಸಿಂಗ್
ಇಂಫಾಲ: ರಾಜ್ಯದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟೇತರ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವುದಕ್ಕೆ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜವಂಶಸ್ಥರ ಸಹಾಯ ಕೇಳಿದ್ದಾರೆ. 
ಮುಖ್ಯಮಂತ್ರಿ ಬಿರೇನ್ ಸಿಂಗ್ ಗೆ ಅಗತ್ಯವಾಗಿ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ರಾಜವಂಶಸ್ಥ ಭರವಸೆ ನೀಡಿದ್ದಾರೆ. ಶಿಷ್ಟಾಚಾರವನ್ನು ಬದಿಗೊತ್ತಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಇಂಫಾಲದಲ್ಲಿರುವ ಮಣಿಪುರದ ಅರಮನೆಗೆ ತೆರಳಿದ್ದರು. ರಾಜವಂಶಸ್ಥರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಸಿಎಂ ಬಿರೇನ್ ಸಿಂಗ್, ಬಡಕಟ್ಟು, ಬುಡಕಟ್ಟೇತರ ಸಮುದಾಯಗಳ ಜನರು ಒಂದೇ ಪೋಷಕರ ಮಕ್ಕಳಂತೆ ಜೀವಿಸುತ್ತಿದ್ದಾರೆ. ಬುಡಕಟ್ಟು ಜನರು ಹಿರಿಯ ಸಹೋದರರಾದರೆ ಬುಟಕಟ್ಟೇತರ ಜನರು ಕಿರಿಯ ಸಹೋದರರೆಂಬ ಭಾವನೆಯಲ್ಲಿದ್ದಾರೆ. ಮಣಿಪುರದಲ್ಲಿ ಹಿರಿಯರು ತಮ್ಮ ನಡುವೆ ಉಡುಗೊರೆಗಳನ್ನು ಪರಸ್ಪರ ಹಂಚಿಕೊಳ್ಳುವ ಆಚರಣೆಯಿದ್ದು, ಬುಡಕಟ್ಟು ಹಾಗೂ ಬುಡಕಟ್ಟೇತರ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವುದು ರಾಜವಂಸ್ಥರಿಂದ ಸಾಧ್ಯವಿದೆ ಎಂದು ಬಿರೇನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com