ಅಮೆರಿಕಾದಲ್ಲಿ ಭಾರತೀಯರು ಉದ್ಯೋಗ ಕಸಿಯುವುದಿಲ್ಲ, ಸೃಷ್ಟಿಸುತ್ತಾರೆ: ರವಿಶಂಕರ್ ಪ್ರಸಾದ್

ಭಾರತೀಯರು ಅಮೆರಿಕಾದಲ್ಲಿರುವ ಉದ್ಯೋಗಗಳನ್ನು ಕಸಿಯುವುದಿಲ್ಲ. ಬದಲಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್
ಮುಂಬೈ: ಹೆಚ್-1ಬಿ ವೀಸಾ ನೀತಿಯ ಬಗ್ಗೆ ಅಮೆರಿಕಾದೊಂದಿಗಿನ ಚರ್ಚೆಯಲ್ಲಿ ಭಾರತ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ಭಾರತೀಯರು ಅಮೆರಿಕಾದಲ್ಲಿರುವ ಉದ್ಯೋಗಗಳನ್ನು ಕಸಿಯುವುದಿಲ್ಲ. ಬದಲಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂದಿದೆ. 
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ನಮ್ಮ ಆತಂಕಗಳನ್ನು ಅಮೆರಿಕಾದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಭಾರತೀಯ ಕಂಪನಿಗಳು ಅಥವಾ ಭಾರತೀಯರು ಉದ್ಯೋಗಗಳನ್ನು ಕಸಿಯುವುದಿಲ್ಲ. ಬದಲಾಗಿ ಉತ್ತಮ ಭಾರತ ಹಾಗೂ ಉತ್ತಮ ಅಮೆರಿಕಾಗಾಗಿ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂಬುದನ್ನು ಅಮೆರಿಕಾ ಅರ್ಥಮಾಡಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 
ಅಮೆರಿಕ ಸೇರಿದಂತೆ ವಿಶ್ವದ 80 ರಾಷ್ಟ್ರಗಳ 200 ನಗರಗಳಲ್ಲಿ ಭಾರತೀಯ ಐಟಿ ಕಂಪನಿಗಳಿವೆ. ಅಮೆರಿಕಾದಲ್ಲಿ ಭಾರತೀಯ ಐಟಿ ಕಂಪನಿಗಳು ಕಳೆದ 5 ವರ್ಷಗಳಲ್ಲಿ 20 ಬಿಲಿಯನ್ ಡಾಲರ್ ನಷ್ಟು ಟ್ಯಾಕ್ಸ್ ಕಟ್ಟಿ 4 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಭಾರತೀಯ ಐಟಿ ಉಪಕ್ರಮ ಅಮೆರಿಕಾಗೆ ಆಸ್ತಿ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com