ಮತಯಂತ್ರಗಳು ದೋಷಮುಕ್ತ: ಚುನಾವಣಾ ಆಯೋಗ

ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಹಲವು ರಾಜಕೀಯ ಪಕ್ಷಗಳಿಂದ ಆರೋಪಗಳು...
ವಿದ್ಯುನ್ಮಾನ ಮತ ಯಂತ್ರಗಳು
ವಿದ್ಯುನ್ಮಾನ ಮತ ಯಂತ್ರಗಳು
ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಹಲವು ರಾಜಕೀಯ ಪಕ್ಷಗಳಿಂದ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಮತಯಂತ್ರಗಳನ್ನು ವಿರೂಪಗೊಳಿಸಲಾಗುತ್ತದೆ ಎಂದು ಕೇಳಿಬರುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಬಗ್ಗೆ ಚುನಾವಣಾ ಆಯೋಗ ಖಾರವಾಗಿ ಪ್ರತಿಕ್ರಿಯಿಸಿದ್ದು, ಆಧಾರರಹಿತ, ಊಹಾಪೋಹ ಮತ್ತು ಆರೋಪಗಳನ್ನು ಮಾಡಲಾಗುತ್ತಿದ್ದು ಅದು ತಿರಸ್ಕಾರಕ್ಕೆ ಯೋಗ್ಯವಾದದ್ದು ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಯಾವುದೇ ತಪ್ಪಾಗದಂತೆ ತಡೆಯಲು ಸುರಕ್ಷಿತವಾಗಿ ಕಾಪಾಡಲು ವಿಸ್ತಾರವಾದ ತಾಂತ್ರಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆಯೋಗಕ್ಕೆ ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದೆ.
ಇಂತಹ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಮತ್ತು ಕೆಲವು ರಾಜಕೀಯ ಪಕ್ಷಗಳಿಂದ ಕೇಳಿಬರುತ್ತಿರುವ ಸಂಶಯ, ಊಹಾಪೋಹಗಳನ್ನು ಅದು ನಿರಾಕರಿಸಿದೆ.
ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತಿರುಚಲಾಗಿದೆ, ಹೀಗಾಗಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಎಲ್ಲಾ ಮತಗಳು ಬಿಜೆಪಿಗೆ ಹೋಗಿವೆ. ಇದರ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಮಾಯಾವತಿ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಈ ಹೇಳಿಕೆ ನೀಡಿದೆ.
ಪಂಜಾಬ್ ನಲ್ಲಿ ಕೂಡ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತಿರುಚಲಾಗಿದೆ ಎಂದು ಕೇಜ್ರಿವಾಲ್ ಆರೋಪ ಮಾಡಿದ್ದರು. ಚುನಾವಣಾ ಆಯೋಗದ ದಕ್ಷತೆ ಬಗ್ಗೆ ಜನರಲ್ಲಿನ ನಂಬಿಕೆ ಕಳೆದುಹೋಗುತ್ತಿದೆ. ಇಲ್ಲಿ ಮೋಸ ನಡೆದಿರುವ ಬಗ್ಗೆ ನಮ್ಮಲ್ಲಿ ಬಲವಾದ ಸಾಕ್ಷಿಗಳಿವೆ ಎಂದು ಅರವಿಂದ ಕೇಜ್ರಿವಾಲ್ ಕೂಡ ಆರೋಪಿಸಿದ್ದರು.
ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಬಗ್ಗೆ ತಮಗೆ ನಿಖರ ದೂರುಗಳಾಗಲಿ, ರಾಜಕೀಯ ಪಕ್ಷಗಳಿಂದ ಅಥವಾ ಅಭ್ಯರ್ಥಿಗಳಿಂದ ದೂರು ಬಂದಿಲ್ಲ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com