ಕದಿರಿ ರಥೋತ್ಸವದ ವೇಳೆ ಕಾಲ್ತುಳಿತ ಮೂವರಿಗೆ ಗಾಯ

ಕದಿರಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ರಥೋತ್ಸವದ ವೇಳೆ ಉಂಟಾದ ಕಾಲ್ತುಳಿತದ ವೇಳೆ ಮೂವರು ಭಕ್ತಾದಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅನಂತಪುರ: ಕದಿರಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ರಥೋತ್ಸವದ ವೇಳೆ ಉಂಟಾದ ಕಾಲ್ತುಳಿತದ ವೇಳೆ ಮೂವರು ಭಕ್ತಾದಿಗಳು ಗಾಯಗೊಂಡಿದ್ದಾರೆ.

ಶನಿವಾರ ಬೆಳಗ್ಗೆ ನಡೆದ ರಥೋತ್ಸವದ ವೇಳೆ ಸಂಭವಿಸಿದ ಸಣ್ಣ ಪ್ರಮಾಣದ ಕಾಲ್ತುಳಿತದಲ್ಲಿ ಕರ್ತವ್ಯ ನಿರತ ಪೇದೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಕಾಲ್ತುಳಿತ ಸಂಭವಿಸಿದ ಕೆಲವೇ ಕ್ಷಣದಲ್ಲಿ  ದೇವಾಲಯ ಪ್ರಾಧಿಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರತಿ ವರ್ಷ ಕದಿರಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ಏರ್ಪಡಿಸಲಾಗುತ್ತದೆ. ತೇರು ಎಳೆಯುವ ರಸ್ತೆ  ನೇರವಾಗಿ ಇರದ ಕಾರಣ ಈ ಅನಾಹುತ ಸಂಭವಿಸಿತು ಎಂದು ಹೇಳಲಾಗಿದೆ. ಸುಮಾರು 4 ಲಕ್ಷ ಭಕ್ತಾದಿಗಳು ರಥೋತ್ಸವದ ವೇಳೆ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com