ಪಶ್ಚಿಮ ಬಂಗಾಳಲ್ಲಿ ಜಿಹಾದಿ ಚಟುವಟಿಕೆಗಳ ಬಗ್ಗೆ ಆರ್ ಎಸ್ಎಸ್ ಕಾರ್ಯಕಾರಿಣಿಯಲ್ಲಿ ಚರ್ಚೆ

ಪಶ್ಚಿಮ ಬಂಗಾಳದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗಳನ್ನು ಅಲ್ಲಿನ ಸರ್ಕಾರ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದು ಜಿಹಾದಿಗಳನ್ನು ಓಲೈಸುತ್ತಿದೆ ಎಂದು ಆರ್ ಎಸ್ಎಸ್ ಆರೋಪಿಸಿದೆ.
ಆರ್ ಎಸ್ಎಸ್
ಆರ್ ಎಸ್ಎಸ್
ಕೊಯಂಬತ್ತೂರು: ಪಶ್ಚಿಮ ಬಂಗಾಳದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗಳನ್ನು ಅಲ್ಲಿನ ಸರ್ಕಾರ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದು ಜಿಹಾದಿಗಳನ್ನು ಓಲೈಸುತ್ತಿದೆ ಎಂದು ಆರ್ ಎಸ್ಎಸ್ ಆರೋಪಿಸಿದೆ. 
ಪಶ್ಚಿಮ ಬಂಗಾಳದ್ಲಲಿ ಕಳೆದ ಮೂರು ದಿನಗಳಿಂದ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಡೆಯುತ್ತಿರುವ ಭಯೋತ್ಪಾದನೆಯ ವಿಷಯವನ್ನು ಆರ್ ಎಸ್ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಚರ್ಚಿಸಲಿದೆ (ರಾಷ್ಟ್ರೀಯ ಕಾರ್ಯಕಾರಿಣಿ ಪರಿಷತ್) ಎಂದು ಅರ್ ಎಸ್ ಎಸ್ ನ ಜಂಟಿ ಪ್ರಧಾನ ಕಾರ್ಯದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಮೂರು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಮೂಲಭೂತವಾದಿಗಳ ಭಯೋತ್ಪಾದನೆ ವಿರುದ್ಧ ಹೋರಾಡಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಜಂಟಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ  ಭಯೋತ್ಪಾದಕರಿಂದ ಜನರನ್ನು ರಕ್ಷಿಸುವ ಬದಲು, ಓಲೈಕೆ ಮಾಡುತ್ತಿದೆ ಎಂದು ಆರ್ ಎಸ್ಎಸ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com