ಎನ್ ಬಿರೇನ್ ಸಿಂಗ್
ದೇಶ
ಮಣಿಪುರ ವಿಧಾನಸಭೆ: ಬಹುಮತ ಗೆದ್ದ ಸಿಎಂ ಬಿರೇನ್ ಸಿಂಗ್
ಮಣಿಪುರ ವಿಧಾನಸಭೆಯಲ್ಲಿ ಮಾ.20 ರಂದು ಮುಖ್ಯಮಂತ್ರಿ ಬಿರೇನ್ ಬಹುಮತ ಸಾಬೀತುಪಡಿಸಿದ್ದು, ಬಹುಮತ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಇಂಫಾಲ: ಮಣಿಪುರ ವಿಧಾನಸಭೆಯಲ್ಲಿ ಮಾ.20 ರಂದು ಮುಖ್ಯಮಂತ್ರಿ ಬಿರೇನ್ ಬಹುಮತ ಸಾಬೀತುಪಡಿಸಿದ್ದು, ಬಹುಮತ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
60 ಸದಸ್ಯರಿರುವ ವಿಧಾನಸಭೆಯಲ್ಲಿ 21 ಶಾಸಕರನ್ನು ಹೊಂದಿದ್ದ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 10 ಶಾಸಕರ ಬೆಂಬಲ ಬೇಕಿತ್ತು. ನಾಗ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿದಂತೆ ಸ್ಥಳೀಯ ಪಕ್ಷಗಳ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಅಷ್ಟೇ ಅಲ್ಲದೇ ಪಕ್ಷಾಂತರಗೊಂಡಿದ್ದ ಕಾಂಗ್ರೆಸ್ ನ ಇಬ್ಬರು ಶಾಸಕರು ಹಾಗೂ ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ನ ಶಾಸಕರೂ ಸಹ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು.
ಮಾ.15 ರಂದು ಮಣಿಪುರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿರೇನ್ ಸಿಂಗ್ ಅವರಿಗೆ ಮಾ.20 ರಂದು ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ