ಬಿಜೆಪಿ ಕಾರ್ಪೋರೇಟರ್ ಮನೆ ಮೇಲೆ ದಾಳಿ, ಹಾರ್ದಿಕ್ ಪಟೇಲ್ ಸೇರಿ 60 ಮಂದಿ ವಿರುದ್ಧ ಕೇಸ್

ಬಿಜೆಪಿ ಕಾರ್ಪೋರೇಟರೊಬ್ಬರ ಮನೆ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಪಾಟಿದಾರ್ ಅನಾಮತ್ ಅಂದೋಲನ್ ಸಮಿತಿ...
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
ಅಹಮದಾಬಾದ್: ಬಿಜೆಪಿ ಕಾರ್ಪೋರೇಟರೊಬ್ಬರ ಮನೆ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಪಾಟಿದಾರ್ ಅನಾಮತ್ ಅಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಸೇರಿದಂತೆ 60 ಮಂದಿ ವಿರುದ್ಧ ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಹಾರ್ದಿಕ್ ಪಟೇಲ್ ಹಾಗೂ ಆತನ ಬೆಂಬಲಿಗರು ಇಂದು ಬೆಳಗಿನ ಜಾವ 2 ಗಂಟೆಯ ಸುಮಾರಿ ಬಿಜೆಪಿ ಕಾರ್ಪೋರೇಟರ್ ಪರೇಶ್ ಪಟೇಲ್ ಅವರ ಮನೆ ಮೇಲೆ ದಾಳಿ ಮಾಡಿದ್ದು, ಈ ಸಂಬಂಧ ಈಗಾಗಲೇ 11 ಬಂಧಿಯನ್ನು ಬಂಧಿಸಲಾಗಿದೆ ಮತ್ತು ಹಾರ್ದಿಕ್ ಪಟೇಲ್ ಗಾಗಿ ಲೂಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ತಮ್ಮ ತಂಡದ ಸದಸ್ಯರೊಬ್ಬರ ಬಗ್ಗೆ ಆಕ್ಷೇಪಾರ್ಹ ಸಂದೇಶ ಪೊಸ್ಟ್ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಾಟಿದಾರ್ ಸಮಿತಿ ಸದಸ್ಯರು ಕಾರ್ಪೋರೇಟರ್ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ರಮೋಲ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಜೈಲು ಪಾಲಾಗಿದ್ದ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com