ಹೆಚ್ ಐವಿ ಮತ್ತು ಏಡ್ಸ್ ಹೊಂದಿರುವ ವ್ಯಕ್ತಿಗಳಿಗೆ ಸಮಾನ ಹಕ್ಕು ನೀಡುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಹೆಚ್ ಐವಿ ಏಡ್ಸ್ ಹೊಂದಿದ ವ್ಯಕ್ತಿಗಳಿಗೂ ಇತರರಂತೆ ಸಮಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಹೆಚ್ ಐವಿ  ಏಡ್ಸ್ ಹೊಂದಿದ ವ್ಯಕ್ತಿಗಳಿಗೂ ಇತರರಂತೆ ಸಮಾನ ಅವಕಾಶ ಒದಗಿಸುವ ಮಹತ್ವದ ಮಸೂದೆಗೆ ರಾಜ್ಯಸಭೆ ನಿನ್ನೆ ಅನುಮೋದನೆ ನೀಡಿದೆ.
ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಮತ್ತು ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ (AIDS) (ತಡೆ) ಮತ್ತು ನಿಯಂತ್ರಣ ಮಸೂದೆ 2014ನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಜ್ಯಸಭೆಯಲ್ಲಿ ಮಂಡಿಸಿದರು. ಕಳೆದ ಮೂರು ವರ್ಷಗಳಿಂದ ಬಾಕಿಯಿದ್ದ ಮಸೂದೆಗೆ ನಿನ್ನೆ ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಯಿತು.
ಭಾರತದಲ್ಲಿ ಪ್ರಸ್ತುತ, ಹೆಚ್ ಐವಿ ಏಡ್ಸ್ ಸೋಂಕಿಗೆ ತುತ್ತಾದ 2.39 ದಶಲಕ್ಷ ಜನರಿದ್ದು ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ಬಳಿಕ ಹೆಚ್ ಐವಿ ಸೋಂಕಿನಿಂದ ಹೆಚ್ಚು ಮಂದಿ ಬಳಲುತ್ತಿರುವ ಮೂರನೇ ದೇಶವಾಗಿದೆ.
ಲೈಂಗಿಕ ಕಾರ್ಯಕರ್ತೆಯರು, ಸಲಿಂಗಕಾಮಿಗಳು ಮತ್ತು ಮಾದಕ ವಸ್ತು ಬಳಕೆದಾರರಲ್ಲಿ ಹೆಚ್ ಐವಿ ಸೋಂಕು ಅತಿಯಾಗಿ ಕಾಡುತ್ತಿದೆ.
ತಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ಒಪ್ಪಿಗೆ ಮತ್ತು ಗೌಪ್ಯತೆಯನ್ನು ಮಾಹಿತಿ, ಸೋಂಕಿತ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು,  ಅವರ ದೂರು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಇದು ಮಸೂದೆ ಕಾಳಜಿವಹಿಸುತ್ತದೆ.
ರೋಗಿಯ ಗೌಪ್ಯತೆಗಳನ್ನು ಬಹಿರಂಗಪಡಿಸಿದರೆ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. 
ಪ್ರತಿಪಕ್ಷದವರು ಸೇರಿದಂತೆ ಸಾರ್ವಜನಿಕರು ಕೂಡ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯನ್ನು ಶ್ಲಾಘಿಸಿದ್ದಾರೆ.
ಹೆಚ್ ಐವಿ ಏಡ್ಸ್ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳು ಉತ್ತಮ ಜೀವನಶೈಲಿ ನಡೆಸಲು ಈ ಮಸೂದೆ ಸಹಕಾರಿಯಾಗಲಿದೆ ಎಂದು ಕೊಂಡಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com