ಜುಲೈ 1ರಿಂದ ಜಿಎಸ್ ಟಿ ಅನುಷ್ಠಾನ: ಅರುಣ್ ಜೇಟ್ಲಿ ಭರವಸೆ

: ದೇಶದ ಬೃಹತ್ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪದ್ದತಿಯನ್ನು ಜುಲೈ 1ರಿಂದ ಅನುಷ್ಠಾನಗೊಳಿಸುವ ವಿಶ್ವಾಸವನ್ನು ಹಣಕಾಸು ...
ಅರುಣ್ ಜೈಟ್ಲಿ
ಅರುಣ್ ಜೈಟ್ಲಿ

ನವದೆಹಲಿ: ದೇಶದ ಬೃಹತ್ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪದ್ದತಿಯನ್ನು ಜುಲೈ 1ರಿಂದ ಅನುಷ್ಠಾನಗೊಳಿಸುವ ವಿಶ್ವಾಸವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಬಜೆಟ್ ಅಧಿವೇಸನದಲ್ಲಿ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿರುವ ಅವರು, ಜುಲೈ 1ರಿಂದ ಜಿಎಸ್‍ಟಿ ಜಾರಿಗೊಳಿಸಲು ಶತಾಯಗತಾಯ ಪ್ರಯತ್ನಿಸಲಾಗುವುದು. ಈ ಪರೋಕ್ಷ ತೆರಿಗೆ ವ್ಯವಸ್ಥೆಯಿಂದ ಸರಕುಗಳು ಮತ್ತು ಸೇವೆಗಳು ಅಗ್ಗವಾಗಲಿದೆ ಹಾಗೂ ತೆರಿಗೆ ವಂಚನೆ ತಪ್ಪಲಿದೆ ಎಂದರು.

ದೆಹಲಿಯಲ್ಲಿ 23ನೇ ಕಾಮನ್‍ವೆಲ್ತ್ ಆಡಿಟರ್ಸ್ ಜನರಲ್ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಅವರು, ಅಲ್ಲದೇ ಶೇ.7 ರಿಂದ 8ರಷ್ಟು ಆರ್ಥಿಕ ಪ್ರಗತಿ ಸಾಧನೆ ಮುನ್ಸೂಚನೆಗಳೂ ಕಂಡುಬರುತ್ತಿವೆ ಎಂದು ಹೇಳಿದ್ದಾರೆ.   

ಭಾರತವು ಶೇ.7 ರಿಂದ 8ರಷ್ಟು ಆರ್ಥಿಕ ಪ್ರಗತಿ ಸಾಧನೆ ಮುನ್ಸೂಚನೆಗಳೂ ಕಂಡುಬರುತ್ತಿವೆ. ಜಾಗತಿಕ ಆರ್ಥಿಕ ಬೆಳವಣಿಗೆ ವೃದ್ದಿಯಾದರೆ ದೇಶದ ಪ್ರಗತಿ ಪ್ರಮಾಣವೂ ಏರಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com