ಈ ವಯಸ್ಸಲ್ಲಿ ತಮ್ಮ ತತ್ವಗಳನ್ನು ಬದಲಾಯಿಸಿ ಕೃಷ್ಣ ತಪ್ಪು ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಈ ವಯಸ್ಸಿನಲ್ಲಿ ತಮ್ಮ ತತ್ವಗಳನ್ನು ಬದಲಾಯಿಸುವ ಮೂಲಕ ಕಾಂಗ್ರೆಸ್ ನ ಮಾಜಿ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಈ ವಯಸ್ಸಿನಲ್ಲಿ ತಮ್ಮ ತತ್ವಗಳನ್ನು ಬದಲಾಯಿಸುವ ಮೂಲಕ ಕಾಂಗ್ರೆಸ್ ನ ಮಾಜಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರು ಅತಿದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಎಲ್ಲಾ ಹುದ್ದೆಗಳನ್ನು ಅನುಭವಿಸಿದವರು, ಪಕ್ಷದಲ್ಲಿ ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೆಸ್ ನ ಕೆಲವು ನಾಯಕರುಗಳಲ್ಲಿ ಎಸ್.ಎಂ.ಕೃಷ್ಣ ಕೂಡ ಒಬ್ಬರು. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಅಂತವರು ಈ ವಯಸ್ಸಿನಲ್ಲಿ ಈ ನಿರ್ಧಾರ ಏಕೆ ತೆಗೆದುಕೊಳ್ಳುತ್ತಾರೆ ಎಂದು ಗೊತ್ತಾಗುವುದಿಲ್ಲ ಎಂದು ಹೇಳಿದರು.
ಕಳೆದ 50 ವರ್ಷಗಳಿಂದ ಪಾಲಿಸಿಕೊಂಡು ಬಂದ ತತ್ವ, ಆದರ್ಶಗಳನ್ನು ಹೇಗೆ ಬದಲಾಯಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಇನ್ನು ಕೆಲ ವರ್ಷಗಳ ಜೀವನವಿದೆಯಷ್ಟೆ. ಈ ಇಳಿ ವಯಸ್ಸಿನಲ್ಲಿ ತಮ್ಮ ತತ್ವಗಳನ್ನು ಬದಲಾಯಿಸಿ ಅತಿದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದ ಹಳೆಯ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ನಲ್ಲಿ ಪರಂಪರೆಯ ನಾಯಕತ್ವವಿದ್ದು ಇತರರ ಮಧ್ಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com