ಹೆಚ್1ಬಿ ವೀಸಾ ಕುರಿತು ಸದ್ಯಕ್ಕೆ ಆತಂಕಪಡುವ ಅವಶ್ಯಕತೆ ಇಲ್ಲ: ಸುಷ್ಮಾ ಸ್ವರಾಜ್

ಹೆಚ್1 ಬಿ ವೀಸಾ ಕಡಿತ ಹಾಗೂ ಅಮೆರಿಕಾದಲ್ಲಿ ಭಾರತಿಯ ಐಟಿ ಉದ್ಯಮಿಗಳ ಉದ್ಯೋಗ ಭದ್ರತೆ ವಿಷಯವಾಗಿ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಹೆಚ್1 ಬಿ ವೀಸಾ ಕಡಿತ ಹಾಗೂ ಅಮೆರಿಕಾದಲ್ಲಿ ಭಾರತಿಯ ಐಟಿ ಉದ್ಯಮಿಗಳ ಉದ್ಯೋಗ ಭದ್ರತೆ ವಿಷಯವಾಗಿ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ವೀಸಾ ಹಾಗೂ ಉದ್ಯೋಗಗಳ ವಿಚಾರವಾಗಿ ಕೇಂದ್ರ ಸರ್ಕಾರ ಅಮೆರಿಕಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾತುಕತೆ ನಡೆಸುತ್ತಿದೆ. ಹೆಚ್1ಬಿ ವೀಸಾ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಮೆರಿಕಾ ಕಾಂಗ್ರೆಸ್ ನಲ್ಲಿ 4 ಮಸೂದೆಗಳಿವೆ. ಮಸೂದೆಗಳು ಅಂಗೀಕಾರವಾಗದಂತೆ ತಡೆಯಲು ಭಾರತ ಸರ್ಕಾರ ಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಗೆ ತಿಳಿಸಿದ್ದಾರೆ. 
ಹೆಚ್1ಬಿ ವೀಸಾ ಕಡಿತ ಹಾಗೂ ಉದ್ಯೋಗ ಭದ್ರತೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com