ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ದರ್ಜೆಯ ಸೀಟಿನಲ್ಲಿ ಕುಳಿತುಕೊಳ್ಳುವ ವಿಷಯದಲ್ಲಿ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಸಿಬ್ಬಂದಿಗೆ ತನ್ನ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.
''ಹೌದು, ನಾನು ಹೊಡೆದಿದ್ದೇನೆ. ಆತ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ'' ಎಂದು ಗಾಯಕ್ ವಾಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗಾಯಕ್ ವಾಡ್ ಪುಣೆಯಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಕುಳಿತುಕೊಳ್ಳುವ ಸೀಟು ವಿಚಾರದಲ್ಲಿ ಜಗಳ ಆರಂಭವಾಯಿತು.
ತಾನು ಬ್ಯುಸಿನೆಸ್ ದರ್ಜೆಯ ಟಿಕೆಟ್ ಪಡೆದರೂ ಎಕಾನಮಿ ದರ್ಜೆಯ ಸೀಟು ನೀಡಲಾಯಿತು. ಇದನ್ನು ಪ್ರಶ್ನಿಸಿದಾಗ ಜಗಳ ಆರಂಭವಾಯಿತು ಎಂದಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಲು ತಂಡ ರಚಿಸಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.